ಹರಪನಹಳ್ಳಿಯಲ್ಲಿ ಆಯೋಜಿಸಿದ್ದ ವಿಜಯನಗರ ಜಿಲ್ಲಾ ಜುಡೋ ಅಸೋಸಿಯೇಷನ್‌ವತಿಯಿಂದ ನಡೆದ ಜುಡೋ ತರಬೇತಿ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಜಿಲ್ಲಾ ಜುಡೋ ಅಸೋಸಿಯೇಷನ್ ಕಾರ್ಯದರ್ಶಿ ವಿನಾಯಕ, ಪದಾಧಿಕಾರಿಗಳಾದ ವಿರೂಪಾಕ್ಷಪ್ಪ, ಎಸ್ ಆರ್ ಶಿವಾನಂದ, ರವಿ ಮೆಹೆತ್ರಿ ಮುಖ್ಯ ತರಬೇತುದಾರ, ಪೂಜಾರ್ ಚೈತ್ರ ಇತರರಿದ್ದರು. 
ಜಿಲ್ಲೆ

ಮನಸ್ಸು ನಿಯಂತ್ರಣದಲ್ಲಿಡಲು ಕ್ರೀಡೆ ಅವಶ್ಯ

ರುದ್ರಪ್ಪ ವಾಲಿ

ಹರಪನಹಳ್ಳಿ: ಜುಡೋ ಆಟ ಕೇವಲ ಕ್ರೀಡೆಯಾಗಿ ಉಳಿಯದೆ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುವ ಕ್ರೀಡೆಯಾಗಿದೆ ಎಂದು ತೆಗ್ಗಿನ ಸಂಸ್ಥಾನದ ಪೀಠಾಧಿಪತಿ ವರಸದ್ಯೋಜಾತ ಸ್ವಾಮೀಜಿ ತಿಳಿಸಿದರು.

ರಪನಹಳ್ಳಿ ಟಿಎಂಎಇ ಸಂಸ್ಥೆಯ ಔಷಧ ಮಹಾವಿದ್ಯಾಲಯ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ವಿಜಯನಗರ ಜಿಲ್ಲಾ ಜುಡೋ ಅಸೋಸಿಯೇಷನ್‌ವತಿಯಿಂದ ಆಯೋಜಿಸಿದ್ದ ತರಬೇತಿ ಶಿಬಿರದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮನಸ್ಸನ್ನು ನಿಯಂತ್ರಣದಲ್ಲಿ ಇರಿಸುವ ಶಕ್ತಿಯನ್ನು ಕ್ರೀಡೆ ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಜುಡೋ ಕ್ರೀಡೆಗೆ ಪ್ರಾಧಾನ್ಯತೆ ಹೆಚ್ಚುತ್ತಿದ್ದು ರಾಷ್ಟ್ರ, ಅಂತಾರಾಷ್ಟ್ರ ಮಟ್ಟದಲ್ಲಿ ಯುವಕರು ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸುತ್ತಿದ್ದಾರೆ. ಇಂದಿನ ಒತ್ತಡದ ಬದುಕಿನಿಂದ ಬಿಡುಗಡೆಹೊಂದಲ ಕ್ರಿಡಾಸಕ್ತಿಯನ್ನು ಹೊಂದಿರಬೇಕು. ಕ್ರೀಡೆಗೆ ಬೌದ್ಧಿಕ ಸಾಮರ್ಥ್ಯ ಹೆಚ್ಚಿಸುವ ಶಕ್ತಿ ಇದೆ. ಇಂತಹ ಕ್ರೀಡೆಗಳನ್ನು ಹೆಚ್ಚು ಪ್ರೋತ್ಸಾಹಿಸಿ ಬೆಳೆಸಬೇಕಾಗಿದೆ ಎಂದರು.

ವಿಜಯನಗರ ಜಿಲ್ಲಾ ಜುಡೋ ಅಸೋಸಿಯೇಷನ್ ಅಧ್ಯಕ್ಷ ಶಶಿಧರ್ ಪೂಜಾರ್ ಮಾತನಾಡಿ, ಕೇವಲ ಕ್ರಿಕೆಟ್ ನಂತಹ ಕ್ರೀಡೆಗೆ ದೇಶದಲ್ಲಿ ಹೆಚ್ಚು ಪ್ರಧಾನ್ಯತೆ ಇದ್ದು, ದೈಹಿಕ ಸದೃಢತೆ ಮತ್ತು ಮಾನಸಿಕ ಆರೋಗ್ಯ ಕಲ್ಪಿಸುವ ಕ್ರೀಡೆಗಳನ್ನು ಬೆಳೆಸಿದರೆ ಜನತೆಯಲ್ಲಿ ಕ್ರಿಡಾಶಕ್ತಿ ಹೆಚ್ಚಳಗೊಳ್ಳಲು ಸಾಧ್ಯವಾಗುತ್ತದೆ ಎಂದರು.

ತರಬೇತುದಾರರಾದ ಸಂತೋಷ್ ಕುಮಾರ್, ಆಕಾಶ್, ಸಾವಿತ್ರಿ, ವಂದನ, ಸ್ಫೂರ್ತಿ, ರಮೇಶ ಬಿ ವೈ, ಆರ್ ಮನೋಜ, ಭರಮಪ್ಪ, ಯುವರಾಜ, ಯಶಸ್ವಿನಿ, ಭಾಗ್ಯಶ್ರೀ, ಮಹಮ್ಮದ್ ಯಾಕೂಬ್ ಖಾನ್, ನಾಗರಾಜ ಗೌಡ, ಅಬ್ದುಲ್ ರೆಹಮಾನ್ ಇತರರಿದ್ದರು.