ಯಲಬುರ್ಗಾದ ಎಸ್.ಎ.ನಿಂಗೋಜಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಕಾನಿಪ ಸಂಘದ ತಾಲೂಕು ಅಧ್ಯಕ್ಷ ಶಿವಮೂರ್ತಿ ಇಟಗಿ ಮಾತನಾಡಿದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ವೀರಣ್ಣ ನಿಂಗೋಜಿ, ಗಾಯಕರಾದ ಲಿಂಗರಾಜ ಬಿಸನಳ್ಳಿ, ಶಿಕ್ಷಕಿಯರಾದ ಶಬನಾ, ಯಮುನಾ, ದೀಪಾ ಇದ್ದರು. 
ಜಿಲ್ಲೆ

ಮನಸ್ಸನ್ನು ನಿಯಂತ್ರಿಸಲು ಸಂಗೀತ ಆಲಿಸಿರಿ

ಯಲಬುರ್ಗಾ: ಸಂಗೀತ, ಸಾಹಿತ್ಯ ಜತೆಗೆ ನಂಟನ್ನು ಇಟ್ಟುಕೊಂಡಾಗ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಕಾನಿಪ ಸಂಘದ ತಾಲೂಕು ಅಧ್ಯಕ್ಷ ಶಿವಮೂರ್ತಿ ಇಟಗಿ ಹೇಳಿದರು.


ಪಟ್ಟಣದ ಎಸ್.ಎ.ನಿಂಗೋಜಿ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುಗಮ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಠ್ಯದ ಜತೆಗೆ ಸಂಗೀತ ಆಲಿಸುವುದರಿಂದ ಮನಸ್ಸು ನಿಯಂತ್ರಣದಲ್ಲಿರುತ್ತದೆ. ಅಲ್ಲದೆ ಶೈಕ್ಷಣಿಕವಾಗಿಯೂ ಮುನ್ನಡೆಯಲು ಅನುಕೂಲವಾಗುತ್ತದೆ ಎಂದರು.


ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ವೀರಣ್ಣ ನಿಂಗೋಜಿ ಮಾತನಾಡಿದರು. ಗಾಯಕರಾದ ಖಾನ್‌ಸಾಬ್ ಕಲ್ಲೂರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಶಿಕ್ಷಕರಾದ ಪ್ರಶಾಂತ, ಶಿವಕುಮಾರ ಇತರರಿದ್ದರು.