ದೇವದುರ್ಗದಲ್ಲಿ ಗಾನಗಂಧರ್ವ ಸಂಗೀತ ಪಾಠಶಾಲೆ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಬಸವ ಕೇಂದ್ರದ ತಾಲೂಕು ಅಧ್ಯಕ್ಷ ಸುಭಾಶ್ಚಂದ್ರ ಪಾಟೀಲ್, ವಕೀಲರಾದ ಪ್ರಕಾಶ ಪಾಟೀಲ್ ಅಮರಾಪುರ, ಮಲ್ಲನಗೌಡ ಗೆಜ್ಜೆಬಾವಿ, ಕಲಾವಿದರಾದ ಚಂದ್ರು ಗೌರಂಪೇಟೆ, ಪ್ರದೀಪ್ ಗದ್ದಿಗೆ, ಕೃಷ್ಣ ಅಕ್ಕರಕಿ, ರಮೇಶ ರುದ್ರಾಕ್ಷಿ, ಎಚ್.ಶಿವರಾಜ ಇತರರಿದ್ದರು. 
ಜಿಲ್ಲೆ

ಮನಸ್ಸಿನ ಏಕಾಗ್ರತೆಗೆ ಸಂಗೀತ ಅವಶ್ಯ

ರುದ್ರಪ್ಪ ವಾಲಿ

ಮನಸ್ಸಿನ, ಏಕಾಗ್ರತೆಗೆ, ಸಂಗೀತ, ಅವಶ್ಯ,mind, concentration, music, essential,
ದೇವದುರ್ಗ: ಸರ್ವರನ್ನೂ ತನ್ನತ್ತ ಸೆಳೆಯುವ ಶಕ್ತಿ ಸಂಗೀತಕ್ಕಿದ್ದು ಹಾಡುಗಳನ್ನು ಕೇಳುವುದರಿಂದ ಭಯ ಹಾಗೂ ಒತ್ತಡಗಳು ದೂರವಾಗಲಿವೆ ಎಂದು ಸಂಗೀತ ಶಿಕ್ಷಕ ನಾಗರೆಡ್ಡಿ ಹೇಳಿದರು.

ಪಟ್ಟಣದ ಅಂಬಾಭವಾನಿ ದೇವಸ್ಥಾನದಲ್ಲಿ ಕಸಾಪದಿಂದ ಆಯೋಜಿಸಿದ್ದ ಗಾನಗಂಧರ್ವ ಸಂಗೀತ ಪಾಠಶಾಲೆ ಉದ್ಘಾಟನೆ ಸಮಾರಂಭದಲ್ಲಿ ಶನಿವಾರ ಮಾತನಾಡಿದರು. ಸಂಗೀತ ಮನಸ್ಸಿಗೆ ಶಾಂತಿ ಉಂಟುಮಾಡುತ್ತದೆ. ಟಿವಿ, ಮೊಬೈಲ್, ಸಾಮಾಜಿಕ ಜಾಲತಾಣ ಹಾವಳಿಯಿಂದ ಹೊರತಂದು ಮಕ್ಕಳಿಗೆ ಸಂಗೀತದ ಶಿಕ್ಷಣ ನೀಡಬೇಕಿದೆ. ಪ್ರಾಥಮಿಕ ಶಾಲಾ ಹಂತದಲ್ಲಿ ವಿಷಯವಾರು ಪದ್ಧತಿಯಂತೆ ಸಂಗೀತ ಬೋಧನೆ ಮಾಡಬೇಕು ಎಂದರು.

ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ ಮಾತನಾಡಿ, ಸಂಗೀತ ಕ್ಷೇತ್ರಕ್ಕೆ ಪುಟ್ಟರಾಜ ಗವಾಯಿಗಳು ಅಪಾರ ಸೇವೆ ಸಲ್ಲಿಸುವ ಜತೆಗೆ ಅನೇಕ ಸಂಗೀತ ವಿದ್ವಾಂಸರನ್ನು ನಾಡಿಗೆ ಪರಿಚಯಿಸಿದ್ದಾರೆ. ತಾಲೂಕಿನ ಸಂಗೀತ ದಿಗ್ಗಜ ರಾಜ ಹನುಮಣ್ಣ ನಾಯಕ ದೊರೆ ಮೈಸೂರು ಸಂಗೀತ ವಿಶ್ವವಿದ್ಯಾಲಯದ ಕುಲಪತಿಯಾಗಿ ಸೇವೆ ಸಲ್ಲಿಸಿದ್ದಾರೆ. ಹಲವರು ಸಂಗೀತದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳು ಸಂಗೀತ ಕಲಿಕೆಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.

ಪ್ರಮುಖರಾದ ಮಲ್ಲಯ್ಯಸ್ವಾಮಿ ಅಂಜಳ, ರಾಜಕುಮಾರ ಯಾಳಗಿ, ಮುದುರಂಗಪ್ಪ ಪೂಜಾರಿ, ಈರಣ್ಣ ಹೂಗಾರ್ ಇತರರಿದ್ದರು.