ಹಾರೂಗೇರಿ ಪಟ್ಟಣದಲ್ಲಿ ಸತ್ಸಂಗ ಕಾರ್ಯಕ್ರಮ ಜರುಗಿತು. ಡಾ.ಮಹಾಂತಪ್ರಭು ಸ್ವಾಮೀಜಿ, ಡಾ.ಸಿ.ಆರ್.ಗುಡಸಿ, ಆರ್.ಎಂ. ಗಸ್ತಿ, ಬಿ.ಸಿ. ಸರಿಕರ, ಶಿವರಾಯ ಯಲ್ಲಡಗಿ, ಬಿ.ಎ. ಜಂಬಗಿ ಇತರರಿದ್ದರು. 
ಜಿಲ್ಲೆ

ಮನಸ್ಸು ಸ್ವಚ್ಛವಾಗಿದ್ಧರೆ ಸಮಾಧಾನ ಲಭ್ಯ

ಪ್ರಶಾಂತ ಹೂಗಾರ

ಹಾರೂಗೇರಿ: ಪಟ್ಟಣದ ಆಧಾರ ಹಿರಿಯ ನಾಗರಿಕರ ಕಲ್ಯಾಣ ಸಂಸ್ಥೆ ವತಿಯಿಂದ ಸಿದ್ಧಿವಿನಾಯಕ ಬಿ.ಇಡಿ ಕಾಲೇಜಿನಲ್ಲಿ ಈಚೆಗೆ ಹಿರಿಯ ನಾಗರಿಕರಿಗಾಗಿ ಸತ್ಸಂಗ ಕಾರ್ಯಕ್ರಮದಲ್ಲಿ ಸಮಾಧಾನ ವಿಷಯ ಉಪನ್ಯಾಸ ಜರುಗಿತು.

ಶೇಗುಣಸಿ ವಿರಕ್ತಮಠದ ಡಾ.ಮಹಾಂತಪ್ರಭು ಸ್ವಾಮೀಜಿ ಮಾತನಾಡಿ, ಆನಂದ ಪಡೆಯಲು ಸಮಾಧಾನದ ಮಾರ್ಗವನ್ನು ಮನುಷ್ಯ ಮರೆಯುತ್ತಿದ್ದಾನೆ. ಸೂಕ್ತ ಪಥದ ಆಯ್ಕೆಯಿಂದ ಸಮಾಧಾನ ಲಭಿಸುತ್ತದೆ. ಮನಸ್ಸಿನೊಳಗೆ ಕೆಟ್ಟದ್ದು ಇಟ್ಟುಕೊಂಡು ತೀರ್ಥ ಕ್ಷೇತ್ರಗಳಿಗೆ ಹೋದರೆ ಸಮಾಧಾನ ಸಿಗಲ್ಲ. ಮನಸ್ಸು ಸ್ವಚ್ಛವಿದ್ದರೆ ಸಮಾಧಾನ ಬರುತ್ತದೆ. ಬದುಕು ಅರ್ಥೈಸಿಕೊಂಡು ಜೀವನ ಮಾಡಿ ನರಕವನ್ನೂ ಸ್ವರ್ಗವನ್ನಾಗಿಸಿಕೊಳ್ಳಬಹುದು ಎಂದರು.

ಸಂಘದ ಅಧ್ಯಕ್ಷ ಡಾ.ಸಿ.ಆರ್.ಗುಡಸಿ, ಆರ್.ಎಂ. ಗಸ್ತಿ, ಯಲ್ಲಾಲಿಂಗ ಕೊಪ್ಪದ, ಮಾಜಿ ಶಾಸಕರಾದ ಬಿ.ಸಿ. ಸರಿಕರ, ಶೇಗುಣಸಿ ಶಿವರಾಯ ಯಲ್ಲಡಗಿ, ಬಿ.ಎ. ಜಂಬಗಿ, ಡಾ.ಸಿ.ಆರ್.ಗುಡಸಿ, ಎಸ್.ಕೆ. ಪತ್ತಾರ, ಶ್ರೀಪಾಲ ಉಗಾರೆ, ಬಸವರಾಜ ತುಳಸಿಗೇರಿ, ಅಮರಶೆಟ್ಟಿ, ಜಿ.ಆರ್. ಕಿಲ್ಲೇದಾರ ಇತರರಿದ್ದರು.