ಲಕ್ಷ್ಮೇಶ್ವರ. ಬಿಸಿಎನ್ ಕಾಟನ್ ಜಿನ್ನಿಂಗ್ ಕಾರ್ಖಾನೆಯಲ್ಲಿ ವಿದ್ಯುತ್ ಅವಘಡದಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಹತ್ತಿ ಸುಟ್ಟು ಕರಕಲಾದ ಘಟನೆ ಭಾನುವಾರ ನಡೆದಿದೆ.
ಹಿಂದುಸ್ತಾನ್ ಟ್ರೇಡಿಂಗ್ ಕಂಪನಿಯ ಮೌಲಾಸಾಬ ಗುಡಾರದ ಅವರಿಗೆ ಸೇರಿದ ಹತ್ತಿ ಸುಟ್ಟಿದೆ. ವಿಷಯ ತಿಳಿದು ಪಟ್ಟಣದ ಅಗ್ನಿ ಶಾಮಕ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿ ಹೆಚ್ಚಿನ ಹಾನಿ ಮತ್ತು ಅಪಾಯ ತಪ್ಪಿಸಿದರು.
ಪಟ್ಟಣದಲ್ಲಿ ಅಗ್ನಿ ಶಾಮಕ ಠಾಣೆಯಲ್ಲಿ ಬೆಂಕಿ ನಂದಿಸುವ ಕಾರ್ಯಕ್ಕೆ ಸಣ್ಣ ವಾಹನ ಇರುವುದರಿಂದ ದೊಡ್ಡ ಮಟ್ಟದಲ್ಲಿ ಬೆಂಕಿ ಅವಘಡಗಳು ಸಂಭವಿಸಿದರೆ ತೊಂದರೆಯಾಗುತ್ತದೆ. ತಾಲೂಕು ಕೇಂದ್ರವಲ್ಲದೆ ಅನೇಕ ಜಿನ್ನಿಂಗ್ ಫ್ಯಾಕ್ಟರಿಗಳು, ಮಿಲ್, ಎಪಿಎಂಸಿ ಇರುವುದರಿಂದ ಸರ್ಕಾರ ಕೂಡಲೇ ದೊಡ್ಡ ವಾಹನಗಳನ್ನು ಅಗ್ನಿ ಶಾಮಕ ಠಾಣೆಗೆ ಒದಗಿಸಬೇಕು ಎಂದು ಮಾಲತೇಶ ಜಿನ್ನಿಂಗ್ ಫ್ಯಾಕ್ಟರಿ ರಾಜಣ್ಣ ಹೊಳಲಾಪೂರ ಆಗ್ರಹಿಸಿದ್ದಾರೆ.