ಹುಬ್ಬಳ್ಳಿ: ಇಲ್ಲಿಯ ನವ ಅಯೋಧ್ಯಾನಗರದ 3ನೇ ಅಡ್ಡರಸ್ತೆಯಲ್ಲಿ ಶ್ರೀ ವೀರ ಕಕ್ಕಯ್ಯ ಗಜಾನನೋತ್ಸವ ಸಮಿತಿಯವರು ಈ ಬಾರಿ ಸಿರಿಧಾನ್ಯದಲ್ಲಿ ಮೂಡಿದ ಗಣಪ ಪ್ರತಿಷ್ಠಾಪಿಸಿದ್ದಾರೆ.
ಸಿರಿಧಾನ್ಯಗಳಿಂದ ಮಾಡಿದ ಶಿವಶರಣ ಕಕ್ಕಯ್ಯನೊಂದಿಗೆ ಗಣೇಶ ಮೂತಿರ್ಯು ಗಮನ ಸೆಳೆಯುತ್ತಿದೆ.
ಕಲಾವಿದ ಶಿವಲಿಂಗಪ್ಪ ಎಸ್. ಬಡಿಗೇರ ಅವರು ಆರು ಅಡಿ ಎತ್ತರದ ಮಣ್ಣಿನ ಮೂರ್ತಿ ತಯಾರಿಸಿ ನಂತರ ಸಿರಿಧಾನ್ಯಗಳನ್ನು ಅಂಟಿಸಲಾಗಿದೆ. ನವಣೆ, ಸಜ್ಜೆ, ರಾಗಿ, ಜೋಳ, ಸಾವೆ ಮತ್ತು ಬೇಳೆ ಸೇರಿ 50 ಕೆಜಿ ಸಿರಿಧಾನ್ಯ ಬಳಸಲಾಗಿದೆ ಎಂದು ತಿಳಿಸಿದ್ದಾರೆ.