ಬೆಂಗಳೂರು: ಆಹಾರ ಸುರಕ್ಷತೆ ಹಾಗೂ ಔಷಧ ಆಡಳಿತ ಇಲಾಖೆ ಮತ್ತು ಕೆಎಂಎ್ ಸಹಯೋಗದಲ್ಲಿ ಶುಕ್ರವಾರ ಮತ್ತು ಶನಿವಾರ ರಾಜ್ಯಾದ್ಯಂತ ಸರ್ಕಾರಿ ಹಾಗೂ ಖಾಸಗಿ ಹಾಲಿನ ಮಾದರಿಗಳ ಸಂಗ್ರಹಣೆಗೆ ವಿಶೇಷ ಆಂದೋಲನ ನಡೆಸಲಾಯಿತು. ಈ ವೇಳೆ ರಾಜ್ಯಾದ್ಯಂತ 870 ಹಾಲಿನ ಆಹಾರ ಮಾದರಿಗಳನ್ನು ಸಂಗ್ರಹಿಸಿ ಗುಣ ವಿಶ್ಲೇಷಣೆಗಾಗಿ ಆಹಾರ ಸುರಕ್ಷತಾ ಪ್ರಯೋಗಾಲಯ ಮತ್ತು ಕೆಎಂಎ್ ಪ್ರಯೋಗಾಲಯಗಳಿಗೆ ಕಳಿಸಿಕೊಡಲಾಗಿದೆ ಎಂದು ಆಹಾರ ಸುರಕ್ಷತೆ ಇಲಾಖೆ ತಿಳಿಸಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಮಾದರಿ ಸಂಗ್ರಹ?:
ಬಿಬಿಎಂಪಿ ವ್ಯಾಪ್ತಿಯಲ್ಲಿ 54, ಬಾಗಲಕೋಟೆ 35, ಬೆಂಗಳೂರು ಗ್ರಾಮಾಂತರ 26, ಬೆಂಗಳೂರು ನಗರ 11, ಬೆಳಗಾವಿ 41, ಬಳ್ಳಾರಿ 9, ಬೀದರ್ 20, ಚಾಮರಾಜನಗರ 4, ಚಿಕ್ಕಬಳ್ಳಾಪುರ 10, ಚಿಕ್ಕಮಗಳೂರು 10, ಚಿತ್ರದುರ್ಗ 11, ದಕ್ಷಿಣ ಕನ್ನಡ 45, ದಾವಣಗೆರೆ 45, ಧಾರವಾಡ 27, ಗದಗ 25, ಹಾಸನ 71, ಹಾವೇರಿ 24, ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ 18, ಕೊಡಗು 27, ಕಲಬುರಗಿ 46, ಕೋಲಾರ 12, ಕೊಪ್ಪಳ 22, ಮಂಡ್ಯ 40, ಮೈಸೂರು 59, ಮೈಸೂರು ಸಿಟಿ 13, ರಾಯಚೂರು 31, ರಾಮನಗರ 19, ಶಿವಮೊಗ್ಗ 24, ತುಮಕೂರು 5, ಉಡುಪಿ 24, ವಿಜಯನಗರ 30, ವಿಜಯಪುರ 21, ಯಾದಗಿರಿ 8 ಮಾದರಿಯನ್ನು ಸಂಗ್ರಹಿಸಲಾಗಿದೆ.