K.BASAVANTAPPA 
ಜಿಲ್ಲೆ

ಆ.16 ರಂದು ಹಾಲುಮತ ಧರ್ಮ ಮತ್ತು ಪರಿಸರ ಜಾಗೃತಿ ಯಾತ್ರೆ

Raichur - Reporter - Rachhai Swamy

ರಾಯಚೂರು ಶ್ರಾವಣ ಮಾಸದ ನಿಮಿತ್ತ ತಿಂತಣಿ ಬ್ರಿಜ್ ಕನಕ ಗುರುಪೀಠದ ಶ್ರೀ ಸಿದ್ದರಾಮಾನಂದ ಮಹಾಸ್ವಾಮೀಜಿಯವರ ಸಾನಿಧ್ಯದಲ್ಲಿ ಆ.16 ರಂದು ಹಾಲುಮತ ಧರ್ಮ ಮತ್ತು ಪರಿಸರ ಜಾಗೃತಿ ಯಾತ್ರೆಯನ್ನು ತಾಲೂಕಿನ ಹುಣಸಿಹಾಳ ಹುಡಾದಲ್ಲಿ ಹಮ್ಮಿಕೊಳ್ಳಲಾಗಿದೆಂದು ಕುರುಬ ಸಮಾಜ ಜಿಲ್ಲಾಧ್ಯಕ್ಷ ಕೆ.ಬಸವಂತಪ್ಪ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾಜದಲ್ಲಿ ಬದುಕಬೇಕಾದರೆ ಸಂಸ್ಕೃತಿ ಬೇಕು, ಜೀವ ಸಂಕುಲ ಬದುಕಬೇಕಾದ ಪ್ರಕೃತಿ ಬೇಕು ಎಂಬ ಘೋಷದೊಂದಿಗೆ ಯಾತ್ರೆಯನ್ನು ಪ್ರಾರಂಭ ಮಾಡಲಾಗುತ್ತದೆ.

ಅಂದು ಮಧ್ಯಾಹ್ನ 2.30ಕ್ಕೆ ಯಾತ್ರೆಯು ಪೂರ್ಣ ಕುಂಬ ಕಳಸದೊಂದಿಗೆ ಸುಮಂಗಲೆಯರು, ವಾದ್ಯಗಳೊಂದಿಗೆ ಮೆರವಣಿಗೆ ನಡೆಯಲಿದೆ. ನಂತರ ವೇದಿಕೆ ಕಾರ್ಯಕ್ರಮ ನಡೆಯುತ್ತದೆ. ಸಾರ್ವಜನಿಕರಿಗೆ ಸಸಿಗಳನ್ನು ನೀಡಲಾಗುತ್ತದೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದರು.

ಈ ಸಂದರ್ಭದಲ್ಲಿ ನಾಗೇಂದ್ರಪ್ಪ ಮಟಮಾರಿ,ಲಕ್ಷ್ಮಣ ತಾತ ಗಾಣಧಾಳ, ನಾಗರಾಜ ಮಡ್ಡಿಪೇಟೆ, ಮಾಹದೇವಪ್ಪ ಮಿರ್ಜಾಪುರು, ಕೆ.ಬಡೆಪ್ಪ ಮಟಮಾರಿ ಇದ್ದರು.