ಜಿಲ್ಲೆ

ಮಿಲಿಟರಿ ಶಾಲೆಗೆ 8ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

Kopala - Raveendra V K

ಕೊಪ್ಪಳ:ರಾಷ್ಟ್ರೀಯ ಇಂಡಿಯನ್​ ಮಿಲಿಟರಿ, ಡೆಹರಾಡೂನ್​ ಕಾಲೇಜ್​, 8ನೇ ತರಗತಿ ಪ್ರವೇಶಕ್ಕೆ ರಾಜ್ಯದ ಬಾಲಕ ಮತ್ತು ಬಾಲಕಿಯರಿಗೆ ಡಿಸೆಂಬರ್​ ತಿಂಗಳಲ್ಲಿ ನಡೆಯಲಿರುವ ಅರ್ಹತಾ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ.

ಡಿಸೆಂಬರ್​ 1ರ ಭಾನುವಾರ ಬೆಂಗಳೂರು ಕೇಂದ್ರದಲ್ಲಿ ನಡೆಸಲಾಗುವುದು. 7ನೇ ತರಗತಿ ಓದುತ್ತಿರುವ ಅಥವಾ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಅರ್ಹರು. ಪ್ರಾಸ್ಪೆಕ್ಟಸ್​ ಕಮ್​ ಅರ್ಜಿ ನಮೂನೆ ಮತ್ತು ಹಳೆಯ ಪ್ರಶ್ನೆ ಪತ್ರಿಕೆಗಳ ಕಿರುಪುಸ್ತಕವನ್ನು ರಾಷ್ಟ್ರೀಯ ಭಾರತೀಯ ಮಿಲಿಟರಿ ಕಾಲೇಜು, ಗರಹಿ ಕ್ಯಾಂಟ್​, ಡೆಹ್ರಾಡೂನ್​, ಉತ್ತರಾಖಂಡ್​-248003 ಮೂಲಕ ಪಡೆಯಬಹುದು.

ಸೆ.30ರೊಳಗೆ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ನಂ.58, ಫೀಲ್ಡ್​ ಮಾರ್ಷಲ್​ ಕೆ.ಎಂ.ಕಾರ್ಯಪ್ಪ ಭವನ್​, ಫೀಲ್ಡ್​ ಕೆ.ಎಂ.ಕಾರ್ಯಪ್ಪ ರಸ್ತೆ, ಬೆಂಗಳೂರು-&25 ಇವರಿಗೆ ಸಲ್ಲಿಸಬೇಕು. ಮಾಹಿತಿಗಾಗಿ ಬಾಗಲಕೋಟೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಕಚೇರಿ ಸಂಪರ್ಕಿಸಬಹುದು ಎಂದು ಬಾಗಲಕೋಟೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.