ಬಳ್ಳಾರಿ ; ತಾಲೂಕಿನ ಜೋಳದರಾಶಿ, ಕೆ.ವೀರಾಪುರ, ಚೆಳ್ಳಗುರ್ಕಿ ಗ್ರಾಮದ ಬಯಲು ಪ್ರದೇಶದಲ್ಲಿ ಪ್ಯಾರ ಮಿಲ್ಟ್ರಿ ಪಡೆ ಗುರುವಾರ ಸಮರಾಭ್ಯಾಸ ನಡೆಸಿತು.
ಬೆಂಗಳೂರಿನಲ್ಲಿ ಸೈನಿಕ ತರಬೇತಿ ಪಡೆಯುತ್ತಿರುವರನ್ನು ಹೊತ್ತು ತರುವ ವಿಮಾನ 35 ಸಾವಿರ ಅಡಿ ಎತ್ತರದಿಂದ ಪ್ಯಾರಚೂಟ್ ಮೂಲಕ ವಿಮಾನದಿಂದ ಹೊರಗಡೆ ಜಿಗಿಯಲು ಸೂಚಿಸುತ್ತಾರೆ. ಬಳಿಕ ಅಲ್ಲಿಂದ ಸೈನಿಕರು ಪ್ಯಾರಚೂಟ್ ಒಪನ್ ಮಾಡಿಕೊಂಡು 12 ರಿಂದ 13 ನಿಮಿಷದೊಳಗೆ ಭೂಮಿಗೆ ತಲುಪುವ ದೃಶ್ಯ ರೋಮಂಚನಕವಾಗಿದೆ. ಒಂದೇ ಬಾರಿಗೆ 20 ರಿಂದ 25 ಜನ ಒಂದೇ ವಿಮಾನದಿಂದ ಒಬ್ಬೊಬ್ಬರಾಗಿ ಭೂಮಿಗೆ ಹಾರುವ ದೃಶ್ಯ ನೋಡುಗರನ್ನು ಆಕರ್ಷಕಗೊಳಿಸಿದೆ.
ಇದರಲ್ಲಿ 250 ಕ್ಕೂ ಹೆಚ್ಚು ಸೈನಿಕರಿಗೆ ತರಬೇತಿ ನೀಡುವ ಗುರಿ ಹೊಂದಿತ್ತು. ಬೆಳಗ್ಗೆ ಹನ್ನೊಂದು ಗಂಟೆ ವೇಳೆಗಾಗಲೇ ನಾಲ್ಕು ತರಬೇತಿ ನೀಡಲಾಗಿತ್ತು. ಆದರೆ, ಮಧ್ಯಾಹ್ನಯಾದಂತೆ ಗಾಳಿ ಹೆಚ್ಚಿದ್ದರಿಂದ ತರಬೇತಿ ಸ್ಥಗಿತಗೊಂಡಿತು. ಗಿಡ ಮರಗಳಿಲ್ಲದ ಬಯಲು ಪ್ರದೇಶದಲ್ಲಿ ತರಬೇತಿ ನೀಡುವುದಕ್ಕೆ ಉತ್ತಮ ಎಂಬ ಉದ್ದೇಶದಿಂದ ಈ ಗಡಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ.