ಜಿಲ್ಲೆ

ನಿರಂತರ ಕಲಿಕೆ ಇರಲಿ : ಪ್ರೊ.ಡಾ.ಎಚ್.ಎಸ್.ಬಲ್ಲಾಳ್ ಅಭಿಮತ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಯುವಕರು ದೇಶದ ಸಂಪತ್ತು. ಅವರ ಮೇಲೆ ದೇಶದ ಭವಿಷ್ಯ ರೂಪಿಸುವ ಜವಾಬ್ದಾರಿ ಇದೆ. ಯಶಸ್ಸು ರಾತ್ರೋರಾತ್ರಿ ಸಂಭವಿಸುವ ವಿದ್ಯಮಾನವಲ್ಲ. ಬದಲಾಗಿ ವರ್ಷಗಳ ಕಠಿಣ ಪರಿಶ್ರಮ, ಕಲಿಕೆ ಮತ್ತು ಸ್ಥಿತಿಸ್ಥಾಪಕತ್ವದ ಪರಾಕಾಷ್ಠೆಯಾಗಿದೆ. ನಿರಂತರ ಕಲಿಕೆ ಅತ್ಯಗತ್ಯ ಎಂದು ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ ಕುಲಪತಿ ಪ್ರೊ.ಡಾ.ಎಚ್.ಎಸ್.ಬಲ್ಲಾಳ್ ಹೇಳಿದರು.

ಮೂಡುಬಿದಿರೆಯಲ್ಲಿರುವ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಂಜಿನಿಯರಿಂಗ್(ಮೈಟ್) ಕಾಲೇಜಿನಲ್ಲಿ ಗುರುವಾರ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ರಾಜಲಕ್ಷ್ಮೀ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ರಾಜೇಶ್ ಚೌಟ ಅಧ್ಯಕ್ಷತೆ ವಹಿಸಿ ಮಾತನಾಡಿ, ಪದವೀಧರರು ಸೇವೆ ಮತ್ತು ಯಶಸ್ಸಿನ ದೃಷ್ಟಿಕೋನ ಹೊಂದಬೇಕು. ಜ್ಞಾನ, ಸೇವೆ ಮತ್ತು ಸಮರ್ಪಣೆ ಯಶಸ್ವಿ ವೃತ್ತಿ ಜೀವನ ಮತ್ತು ಅರ್ಥಪೂರ್ಣ ಜೀವನದ ಆಧಾರಸ್ತಂಭಗಳಾಗಿವೆ ಎಂದರು.

ಇಬ್ಬರು ಪಿಎಚ್.ಡಿ, 671 ಇಂಜಿನಿಯರಿಂಗ್ ಪದವೀಧರರು, 104 ಮ್ಯಾನೇಜ್‌ಮೆಂಟ್ ಪದವೀಧರರು ಮತ್ತು 58 ಎಂಸಿಎ ಪದವೀಧರರಿಗೆ ಪದವಿ ಪ್ರಮಾಣಪತ್ರ ನೀಡಲಾಯಿತು. ಡಾ.ಎಚ್.ಎಸ್.ಬಲ್ಲಾಳ್ ಪ್ರಮಾಣವಚನ ಬೋಧಿಸಿದರು.

ಆಡಳಿತ ಮಂಡಳಿ ಸದಸ್ಯೆ ರಾಜಲಕ್ಷ್ಮೀ ಚೌಟ ಉಪಸ್ಥಿತರಿದ್ದರು. ಪ್ರಾಂಶುಪಾಲ ಡಾ.ಪ್ರಶಾಂತ್ ಸಿ.ಎಂ. ಸ್ವಾಗತಿಸಿದರು. ಉಪ ಪ್ರಾಂಶುಪಾಲ ಡಾ.ರಾಜಶೇಖರ್ ವಂದಿಸಿದರು. ಶಿಕ್ಷಕಿ ದೀಪ್ತಿ ಶೆಟ್ಟಿ ನಿರೂಪಿಸಿದರು.

ವಿವಿ ಮಟ್ಟದಲ್ಲಿ ರ‌್ಯಾಂಕ್ ಪಡೆದವರಿಗೆ ಸನ್ಮಾನ

ಮೆಕಾಟ್ರಾನಿಕ್ಸ್ ಇಂಜಿನಿಯರಿಂಗ್‌ನಲ್ಲಿ ವಿಶ್ವವಿದ್ಯಾಲಯ ರ‌್ಯಾಂಕ್ ಪಡೆದ ಪ್ರವೇಶ್ ಪ್ರಸನ್ನ ನಾಯಕ್, ಶಶಾಂಕ್ ಒ.ಎಂ., ಮನೋಜ್ ಗೌಡ ಬಿ., ಅನಿತ್ ಕುಮಾರ್, ಮೊಹಮ್ಮದ್ ಅನ್ಫಾಲ್, ಏರೋನಾಟಿಕಲ್ ಇಂಜಿನಿಯರಿಂಗ್‌ನಲ್ಲಿ ಮೋನಿಶಾ ಎಂ., ರಂಜಿತಾ ಜಿ., ತುಷಾರ್, ದೀಕ್ಷಾ ರಮೇಶ್ ಭಂಡಾರಿ ಅವರನ್ನು ಚಿನ್ನದ ಪದಕದೊಂದಿಗೆ ಸನ್ಮಾನಿಸಲಾಯಿತು.

ಪ್ರತಿ ವಿಭಾಗದ ಟಾಪರ್

ಏರೋನಾಟಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಮೋನಿಷಾ ಎಂ., ಕೃತಕ ಬುದ್ಧಿಮತ್ತೆ ವಿಭಾಗ-ಶ್ರೇಯಾ ಭಟ್, ಕಂಪ್ಯೂಟರ್ ವಿಜ್ಞಾನ ವಿಭಾಗ- ಅಂಕಿತಾ ಭಟ್ ಕೆ., ಸಿವಿಲ್ ಇಂಜಿನಿಯರಿಂಗ್ ವಿಭಾಗ-ಗಿರೀಶ್ ದಿನಕರ್ ಮಡಿವಾಲ್, ಇಲೆಕ್ಟ್ರಾನಿಕ್ಸ್ ಮತ್ತು ಸಂವಹನ ವಿಭಾಗ-ರಿತಿಕಾ, ಮಾಹಿತಿ ವಿಜ್ಞಾನ ವಿಭಾಗ- ವಿಜೇತಾ ಪೈ, ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗ- ಜ್ಞಾನೇಶ್ ಬಿ.ಎಸ್., ಮೆಕಾಟ್ರಾನಿಕ್ಸ್ ವಿಭಾಗ- ಪ್ರವೇಶ್ ಪ್ರಸನ್ನ ನಾಯಕ್, ಎಂಬಿಎ ವಿಭಾಗ- ಲಿಶಾ ಡಿಸೋಜ ಮತ್ತು ಎಂಸಿಎ ವಿಭಾಗ- ಆಯೇಷಾ ಸರಿಯಾ ಮನೇಗರ್ ಮತ್ತು ಶಮಿತಾ ಎಸ್ ಹೆಗ್ಡೆ ಅವರನ್ನು ಚಿನ್ನದ ಪದಕಗಳೊಂದಿಗೆ ಸನ್ಮಾನಿಸಲಾಯಿತು.