RAICHUR 
ಜಿಲ್ಲೆ

ಬೆಟ್ಟದೂರು ಆಸ್ಪತ್ರೆಯಲ್ಲಿ ಮೈಕ್ರೊ ವೇವ್ ಅಬ್ಲೇಶನ್ ಚಿಕಿತ್ಸೆ ಲಭ್ಯ

ರಾಯಚೂರು ರಾಜ್ಯದಲ್ಲಿ ಮೊದಲ ಬಾರಿಗೆ ಬಂಜೆತನ ಸೇರಿದಂತೆ ಸ್ತ್ರೀರೋಗದ ಕುರಿತಂತೆ ಹೊಸದಾಗಿ ಅವಿಷ್ಕಾರಸಲಾದ ನೂತನ ತಂತ್ರಜ್ಞಾನ ಮೈಕ್ರೊ ವೇವ್ ಅಬ್ಲೇಶನ್ ಚಿಕಿತ್ಸೆ ಮೂಲಕ ಚಿಕಿತ್ಸಾ ವ್ಯವಸ್ಥೆ ನಗರದ ಬೆಟ್ಟದೂರು ಆಸ್ಪತ್ರೆಯಲ್ಲಿ ಜೂ.28ರಿಂದ ಪ್ರಾರಂಭವಾಗಲಿದೆಂದು ಬೆಟ್ಟದೂರು ಆಸ್ಪತ್ರೆಯ ಮುಖ್ಯಸ್ಥ ಡಾ.ಜಯಪ್ರಕಾಶ ಪಾಟೀಲ್ ಬೆಟ್ಟದೂರು ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತೈವಾನ್ ಮತ್ತು ಚೈನಾ ದೇಶದಲ್ಲಿ ಈಗಾಗಲೇ ಚಿಕಿತ್ಸಾ ವ್ಯವಸ್ಥೆ ಜಾರಿಯಲ್ಲಿದೆ. ಹೊಸ ತಂತ್ರಜ್ಞಾನ ಚಿಕಿತ್ಸಾ ವ್ಯವಸ್ಥೆ ರಾಜ್ಯದಲ್ಲಿ ಪ್ರಾರಂಭವಾಗಿ ಇನ್ನೂ ಒಂದು ವರ್ಷವೂ ಪೂರ್ಣಗೊಂಡಿಲ್ಲ. ಮೊದಲ ಬಾರಿಗೆ ಸ್ತ್ರೀರೋಗಗಳಿಗೆ ಸಂಬಂಧಿಸಿದಂತೆ ಶಸ್ತ್ರ ಚಿಕಿತ್ಸೆ ಇಲ್ಲದೇ ಚಿಕಿತ್ಸೆ ನೀಡುವ ವ್ಯವಸ್ಥೆ ರಾಯಚೂರಿನಲ್ಲಿ ದೊರೆಯಲಿದೆ. ಗರ್ಭಾಶಯದಲ್ಲಿ ಆಗುವ, ಸ್ತನಗಳಲ್ಲಿ ಆಗುವ ಗಡ್ಡೆಗಳನು ಶಸ್ತ್ರ ಚಿಕಿತ್ಸೆ ಇಲ್ಲದೇ ಕರಗಿಸುವ ವ್ಯವಸ್ಥೆ ಇದಾಗಿದೆ ಎಂದರು.

ರಾಜ್ಯದಲ್ಲಿ ಮೊದಲ ಬಾರಿಗೆ ಬೆಟ್ಟದೂರು ಆಸ್ಪತ್ರೆಯಲ್ಲಿ ದೊರೆಯುವದರಿಂದ ದೂರದ ಊರುಗಳಿಗೆ ಹೋಗಿ ಚಿಕಿತ್ಸೆ ಪಡೆಯುವ ಸಮಯ ಮತ್ತು ಹಣ ಹೊರೆಯನ್ನು ತಪ್ಪಿಸಲು ಸಹ ಸಹಕಾರಿಯಾಗುತ್ತದೆ. ಸರ್ಜರಿಯಿಲ್ಲದೇ ಚಿಕಿತ್ಸಾ ವ್ಯವಸ್ಥೆ ದೊರೆಯಲಿದೆ.ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಲು ಉದ್ದೇಶಿಸಲಾಗಿದೆ. ಹೆಚ್ಚುತ್ತಿರುವ ಸ್ತ್ರೀ ರೋಗಳಿಗೆ ಸಂಬಂಧಿಸಿದಂತೆ ತ್ವರಿತ ಮತ್ತು ಗುಣಮಟ್ಟದ ಚಿಕಿತ್ಸೆ ದೊರೆಯುವಂತಾಗಲಿದ್ದು ಸದುಪಯೋಗ ಪಡೆಯಬೇಕು ಎಂದರು.


ಈ ಸಂದರ್ಭದಲ್ಲಿ ಆಸ್ಪತ್ರೆಯ ವ್ಯವಸ್ಥಾಪಕ ಮಹಾಂತೇಶ ಸಜ್ಜನ ಇದ್ದರು.