ಜಿಲ್ಲೆ

ಮೈಕ್ರೋ ಪೈನಾನ್ಸ್​ ಮ್ಯಾನೇಜರ್​ ಆತ್ಮಹತ್ಯೆ

Haveri - Kariyappa Aralikatti

ಹಾವೇರಿ: ಮೈಕ್ರೋ ಫೈನಾನ್ಸ್​ನಲ್ಲಿ ಕ್ರೇಡಿಟ್​ ಮ್ಯಾನೇಜರ್​ ಆಗಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿಯ ಮಂಜುನಾಥ ನಗರದಲ್ಲಿ ಗುರುವಾರ ನಡೆದಿದೆ.

ದಾವಣಗೆರೆಯ ನಿಟ್ಟವಳ್ಳಿ ಗ್ರಾಮದ ಕಿರಣಕುಮಾರ ಪರಶುರಾಮ ರಾವ್​ (25) ಮೃತ ವ್ಯಕ್ತಿ.

ಈತ ನಗರದ ಮೈಕ್ರೋ ಫೈನಾನ್ಸ್​ವೊಂದರಲ್ಲಿ ಕ್ರೀಡಿಟ್​ ಮ್ಯಾನೇಜರ್​ ಆಗಿ ಕೆಲಸ ಮಾಡಿಕೊಂಡಿದ್ದ. ಯಾವುದೋ ಕಾರಣದಿಂದ ಮನೆಯಲ್ಲಿಯೆ ನೇಣು ಬಿಇದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ಶಹರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.