ಲಿಂಗಸುಗೂರು ಎಸಿ ಕಚೇರಿ ಎಫ್‌ಡಿಸಿ ಆದಪ್ಪಗೆ ಕರ್ನಾಟಕ ರೈತ ಸಂಘ (ಕೋಡಿಹಳ್ಳಿ ಬಣ)ದ ಮುಖಂಡರು ಮನವಿ ಸಲ್ಲಿಸಿದರು. ರೈತಸಂಘದ ಜಿಲ್ಲಾಧ್ಯಕ್ಷ ಶಿವಪುತ್ರಗೌಡ ಪೊಲೀಸ್ ಪಾಟೀಲ್, ತಾಲೂಕು ಅಧ್ಯಕ್ಷ ಪ್ರಸಾದರಡ್ಡಿ ಪ್ರಮುಖರಾದ ಸಲೀಂ ಅಹ್ಮದ್, ಅಮರೇಶ ಸಾಹುಕಾರ, ರೂಪಾ ಬಸವರಾಜ ಇತರರಿದ್ದರು. 
ಜಿಲ್ಲೆ

ಮೈಕ್ರೋಯಿಂ ಫೈನಾನ್ಸ್ ಕಂಪನಿಯಿಂದ ನಿಯಮ ಉಲ್ಲಂಘನೆ

Kopala - Desk - Eraveni

ಲಿಂಗಸುಗೂರು: ತಾಲೂಕಿನಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಯ ಪರವಾನಗಿ ರದ್ಧುಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರೈತಸಂಘ(ಕೋಡಿಹಳ್ಳಿ ಬಣ)ದ ಮುಖಂಡರು ಎಸಿ ಕಚೇರಿ ಎಫ್‌ಡಿಸಿ ಆದಪ್ಪಗೆ ಶುಕ್ರವಾರ ಮನವಿ ಸಲ್ಲಿಸಿದರು.

ಮೈಕ್ರೋ ಫೈನಾನ್ಸ್ ಕಂಪನಿ ಆರ್‌ಬಿಐ ನಿಯಮ ಉಲ್ಲಂಘಿಸಿ ಹೆಚ್ಚುವರಿ ಬಡ್ಡಿ ವಸೂಲಿ ಮಾಡುತ್ತಿದೆ. ಒಟಿಎಸ್ ಮೂಲಕ ಸಾಲ ಮರುಪಾವತಿಗೆ ಹಣ ಕಟ್ಟಿಸಿಕೊಳ್ಳದೆ ಕಂತಿನ ಪ್ರಕಾರ ಸರಿಯಾದ ಸಮಯಕ್ಕೆ ಪಾವತಿಸಬೇಕೆಂದು ಹೇಳುತ್ತಾರೆ. ಕಂತು ಕಟ್ಟುವಲ್ಲಿ ವಿಳಂಬವಾದರೆ ಸಾಲ ವಸೂಲಿಗೆ ಗೂಂಡಾಗಳನ್ನು ಬಿಟ್ಟು ವಸೂಲಿ ಮಾಡುತಿದ್ದಾರೆ.

ಇದರಿಂದ ಬಡವರು, ಕೂಲಿ ಕಾರ್ಮಿಕರು, ಮಧ್ಯಮ ವರ್ಗದ ಜನರು ಕಂಪನಿ ನಡೆಗೆ ಬೇಸತ್ತು ಹೋಗಿದ್ದಾರೆ. ಕೆಲ ಬಾರಿ ಕಿರುಕುಳ ತಾಳಲಾರದೆ ಊರು ಬಿಟ್ಟು ಹೋದ ಉದಾಹರಣೆಗಳಿವೆ. ಹೀಗಾಗಿ ನೋಂದವರು ಕಂಪನಿ ಸಿಬ್ಬಂದಿ ಮತ್ತು ಗೂಂಡಾಗಳ ಮೇಲೆ ಕಾನೂನು ಕ್ರಮಕೈಗೊಳ್ಳಿ ಒತ್ತಾಯಿಸಿದ್ದಾರೆ.

ರೈತಸಂಘದ ಜಿಲ್ಲಾಧ್ಯಕ್ಷ ಶಿವಪುತ್ರಗೌಡ ಪೊಲೀಸ್ ಪಾಟೀಲ್, ತಾಲೂಕು ಅಧ್ಯಕ್ಷ ಪ್ರಸಾದರಡ್ಡಿ, ಸಲೀಂ ಅಹ್ಮದ್ ಪ್ರಮುಖರಾದ ಅಮರೇಶ ಸಾಹುಕಾರ, ರೂಪಾ ಬಸವರಾಜ ಸೇರಿದಂತೆ ಇತರರಿದ್ದರು.