ಜಿಲ್ಲೆ

ಚಪ್ಪಲಿಯೊಳಗಿಟ್ಟು 17.43 ಲ.ರೂ. ಮೌಲ್ಯದ ಅಕ್ರಮ ಚಿನ್ನ ಸಾಗಾಟ ಪತ್ತೆ

reportermng


ಮಂಗಳೂರು, : ದುಬೈನಿಂದ ಬಂದ ಪ್ರಯಾಣಿಕನೋರ್ವ ಚಿನ್ನವನ್ನು ಚಪ್ಪಲಿಯೊಳಗಿಟ್ಟು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದುದನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.


ದುಬೈನಿಂದ ಬುಧವಾರ ಬಂದಿಳಿದ ಕಾಸರಗೋಡಿನ ಪ್ರಯಾಣಿಕನೋರ್ವ 17.43 ಲ.ರೂ. ಮೌಲ್ಯದ 24 ಕ್ಯಾರೆಟ್‌ನ 332 ಗ್ರಾಂ ಚಿನ್ನವನ್ನು ಆತ ಧರಿಸಿದ್ದ ಚಪ್ಪಲಿಯ ಒಳಭಾಗದಲ್ಲಿ ಅಂಟಿನ ಮಿಶ್ರಣದೊಂದಿಗೆ ಬಚ್ಚಿಟ್ಟುಕೊಂಡು ಸಾಗಿಸುತ್ತಿದ್ದ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.