ನರೇಗಾ ಕೂಲಿ ಕೆಲಸ ನೀಡುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂ ತಾಲೂಕು ಸಮಿತಿ ಸದಸ್ಯರು ಸೋಮವಾರ ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದರು. ಸಂದ ಪದಾಧಿಕಾರಿಗಳಾದ ಹುಲುಗಪ್ಪ ಪರಮಟ್ಟಿ, ಕರಿಯಮ್ಮ, ಶ್ರೀನಿವಾಸ, ಶಿವು ಬೆಣಕಲ್​, ಸುಂಕಪ್ಪ ಗದಗ, ಮಹೇಶ ಕೆ., ಸುಧಾ, ಲಲಿತಮ್ಮ, ತಾಯಮ್ಮ, ಗೌರಮ್ಮ ಇದ್ದರು. 
ಜಿಲ್ಲೆ

ನರೇಗಾ ಕೆಲಸ ನೀಡಿ

Kopala - Raveendra V K

ಕೊಪ್ಪಳ: ತಾಲೂಕಿನ ಹೊಸಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಕೆಲಸ ನೀಡುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂ ತಾಲೂಕು ಸಮಿತಿ ಸದಸ್ಯರು ಸೋಮವಾರ ನಗರದ ತಾಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಹೊಸಳ್ಳಿ ಗ್ರಾಮದಲ್ಲಿ ನರೇಗಾದಡಿ ಕೂಲಿ ಕೆಲಸ ನೀಡುವಂತೆ ಕಳೆದ ತಿಂಗಳು ಮನವಿ ಸಲ್ಲಿಸಲಾಗಿದೆ. ಆದರೆ, ಪಿಡಿಒ ಕೆಲಸ ನೀಡುತ್ತಿಲ್ಲ. ಇಲ್ಲ&ಸಲ್ಲದ ನೆಪ ಹೇಳುತ್ತಿದ್ದಾರೆ. ಕೂಲಿಕಾರರಿಗೆ ವಿನಾ ಕಾರಣ ತೊಂದರೆ ನೀಡುತ್ತಿದ್ದಾರೆ. ಕೆಲಸವಿಲ್ಲದೇ ಸಮಸ್ಯೆ ಆಗುತ್ತಿದೆ ಎಂದು ಆರೋಪಿಸಿದರು. ಎನ್​ಎಂಆರ್​ ತೆಗೆದು ಕೆಲಸ ನೀಡಬೇಕು. ಅರ್ಜಿ ಸಲ್ಲಿಸಿದವರಿಗೆ ಸಕಾಲದಲ್ಲಿ ಕೆಲಸಕ್ಕೆ ಅನುಮತಿಸಬೇಕು. ಅಸಡ್ಡೆ ತೋರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು.

ಪ್ರತಿಭಟನೆ ಬಳಿಕ ತಾಪಂ ಇಒ ದುಂಡಪ್ಪ ತುರಾದಿಗೆ ಮನವಿ ಸಲ್ಲಿಸಲಾಯಿತು. ಸಂದ ಪದಾಧಿಕಾರಿಗಳಾದ ಹುಲುಗಪ್ಪ ಪರಮಟ್ಟಿ, ಕರಿಯಮ್ಮ, ಶ್ರೀನಿವಾಸ, ಶಿವು ಬೆಣಕಲ್​, ಸುಂಕಪ್ಪ ಗದಗ, ಮಹೇಶ ಕೆ., ಸುಧಾ, ಲಲಿತಮ್ಮ, ತಾಯಮ್ಮ, ಗೌರಮ್ಮ, ಮಂಜುಳಾ, ಜಂಬವ್ವ, ನಾಗವೇಣಿ, ಸೈನಜಾ ಬೇಗಂ ಇತರರಿದ್ದರು.