ಜಿಲ್ಲೆ

ಹಳದಿ ಹಾದಿಯಲ್ಲಿ 4ನೇ ಮೆಟ್ರೋ ರೈಲು ಕಾರ್ಯಾಚರಣೆ

ಪವನ್ ಆಚಾರ್ಯ ನೀರ್ಚಾಲು

ಬೆಂಗಳೂರು: ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ ಸೆ.10ರಿಂದ 4ನೇ ರೈಲು ಕಾರ್ಯಾಚರಣೆ ಮಾಡಲಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್​ಸಿಎಲ್​) ತಿಳಿಸಿದೆ. ಆದ್ದರಿಂದ ಪ್ರತಿನಿತ್ಯ ರೈಲುಗಳ ಅಂತರ 19 ನಿಮಿಷಕ್ಕೆ ಇಳಿಕೆಯಾಗಿದೆ. ಸೋಮವಾರದಿಂದ ಶನಿವಾರದವರೆಗೆ, ಮೊದಲ ವಾಣಿಜ್ಯ ಸೇವೆಯು ಬೆಳಗ್ಗೆ 6.30 ಗಂಟೆಯ ಬದಲಿಗೆ ಬೆಳಗ್ಗೆ 6 ಗಂಟೆಗೆ ಪ್ರಾರಂಭವಾಗುತ್ತದೆ. ಭಾನುವಾರದಂದು ಮೊದಲ ರೈಲು ಬೆಳಗ್ಗೆ 7ಗಂಟೆಗೆ ಪ್ರಾರಂಭವಾಗಲಿದೆ. ಈ ಮೊದಲಿನಂತೆ ಕೊನೆಯ ರೈಲು ಆರ್​.ವಿ.ರಸ್ತೆಯಿಂದ ರಾತ್ರಿ 11.55ಕ್ಕೆ ಹಾಗೂ ಬೊಮ್ಮಸಂದ್ರದಿಂದ ರಾತ್ರಿ 10.42ಕ್ಕೆ ಸಂಚರಿಸಲಿದೆ.