ಜಿಲ್ಲೆ

ಮೆಟ್ರೋದಲ್ಲಿ ದೊಡ್ಡ ಲಗೇಜ್​ಗೆ ಬಿತ್ತು ಶುಲ್ಕ!

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಇತ್ತೀಚೆಗೆ ನಮ್ಮ ಮೆಟ್ರೋದಲ್ಲಿ ದೊಡ್ಡ ಗಾತ್ರದ ಲಗೇಜ್​ ಬ್ಯಾಗ್​ ಕೊಂಡೊಯ್ದಿದ್ದ ಪ್ರಯಾಣಿಕರೊಬ್ಬರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ(ಬಿಎಂಆರ್​ಸಿಎಲ್​) 30 ರೂ.ಶುಲ್ಕ ವಿಧಿಸಿರುವ ಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ.

ಈ ಕುರಿತು ಪ್ರಯಾಣಿಕ ಖುದ್ದು ಎಕ್ಸ್​ನಲ್ಲಿ ಪೋಸ್ಟ್​ ಹಾಕಿದ್ದು, ಬಿಎಂಆರ್​ಸಿಎಲ್​ನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಮೆಟ್ರೋ ಈಗಾಗಲೇ ದೇಶದಲ್ಲೇ ಅತ್ಯಂತ ದುಬಾರಿಯಾಗಿದೆ. ಬ್ಯಾಗ್​ಗೆ ಶುಲ್ಕ ಪಾವತಿ ಮಾಡುವುದು ಪ್ರಯಾಣಿಕರ ಮೇಲೆ ಮತ್ತಷ್ಟು ಹೊರೆಯಾಗುತ್ತದೆ. ಜನರು ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವುದನ್ನು ಬಿಎಂಆರ್​ಸಿಎಲ್​ ಹೇಗೆ ತಡೆಯುತ್ತಿದೆ ಎಂಬುವುದಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ ಎಂದು ಬರೆದುಕೊಂಡಿದ್ದಾರೆ.

ಸಾಕಷ್ಟು ಸಾರ್ವಜನಿಕ ಆಕ್ರೋಶಗಳು, ಪ್ರತಿಭಟನೆಗಳ ನಡುವೆಯೂ ೆಬ್ರವರಿಯಲ್ಲಿ ಬಿಎಂಆರ್​ಸಿಎಲ್​ ನಮ್ಮ ಮೆಟ್ರೋ ಪ್ರಯಾಣ ದರವನ್ನು ಏರಿಕೆ ಮಾಡಿದ್ದು, ವಿವಿಧ ಸಂ&ಸಂಸ್ಥೆಗಳು ಟಿಕೆಟೇತರ ಆದಾಯವನ್ನು ಹೆಚ್ಚಿಸುವಂತೆಯೂ, ಪ್ರಯಾಣ ದರ ಇಳಿಕೆ ಮಾಡುವಂತೆ ಮನವಿ ಮಾಡಿತ್ತು. ಅದಾಗಿಯೂ ಶೌಚಗೃಹಗಳಿಗೆ ಶುಲ್ಕ ವಿಧಿಸಿ, ಮೆಟ್ರೋ ರೈಲಿನ ಬೋಗಿಗಳಿಗೆ ಜಾಹೀರಾತು ಅಳವಡಿಸಿ ಟಿಕೆಟೇತರ ಆದಾಯ ವೃದ್ಧಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ತೆಗೆದುಕೊಂಡಿತ್ತು. ಇದೀಗ ದಂಡ ವಸೂಲಿ ಪ್ರಕರಣಗಳು ಹೆಚ್ಚುತ್ತಿದ್ದು, ಇದೂ ಆದಾಯ ವೃದ್ಧಿಸುವ ಯೋಜನೆಯೋ ಎಂದು ಪ್ರಯಾಣಿಕರು ಶಂಕೆ ವ್ಯಕ್ತಪಡಿಸಿದ್ದಾರೆ.

ಲಗೇಜ್​ಗೆ ಟಿಕೆಟ್​: ನಮ್ಮ ಮೆಟ್ರೋದಲ್ಲಿ ಒಬ್ಬ ಪ್ರಯಾಣಿಕನಿಗೆ 60 ಸೆಂ.ಮೀ ಉದ್ದ, 45 ಸೆಂ.ಮೀ. ಅಗಲ ಹಾಗೂ 25 ಸೆಂ ಮೀ ಎತ್ತರವಿರುವ 15 ಕೆಜಿ ಒಳಗಿನ ಬ್ಯಾಗ್​ ಅನ್ನು ಉಚಿತವಾಗಿ ಕೊಂಡೊಯ್ಯಬಹುದು. ಬ್ಯಾಗ್​ ಗಾತ್ರ ಹಾಗೂ ತೂಕ ಹೆಚ್ಚಿದ್ದಲ್ಲಿ 30 ರೂ. ಶುಲ್ಕ ಪಾವತಿಸಿ ಗ್ರಾಹಕ ಸೇವಾ ಕೇಂದ್ರದಿಂದ ಟಿಕೆಟ್​ ಪಡೆಯಬೇಕು. ಹೆಚ್ಚುವರಿ ಬ್ಯಾಗ್​ಗೆ ಟಿಕೆಟ್​ ಖರೀದಿಸದಿದ್ದರೆ 250 ರೂ. ದಂಡ ವಿಧಿಸಲಾಗುತ್ತದೆ. ಶುಲ್ಕ ಪಾವತಿಸದೆ ಪ್ರಯಾಣಿಸುವಾಗ, ಮೆಟ್ರೋ ರೈಲ್ವೆ ಆಡಳಿತ ಮಂಡಳಿಯ ಯಾವುದೇ ಅಧಿಕಾರಿ ಆ ಪ್ರಯಾಣಿಕನನ್ನು ರೈಲಿನಿಂದ ಹೊರಗೆ ಕಳುಹಿಸುವ ಅಧಿಕಾರವನ್ನು ಅಧಿಕಾರ ಇದೆ.

6,500 ಮರಗಳ ತೆರವು!

ನಮ್ಮ ಮೆಟ್ರೋ 3ನೇ ಹಂತದ ಯೋಜನೆಗಾಗಿ (ಆರೆಂಜ್​ ಲೈನ್​)ಬರೋಬ್ಬರಿ 6,500 ಮರಗಳನ್ನು ಕಡಿಯಲು ಮತ್ತು ಸ್ಥಳಾಂತರಿಸಲು ಬಿಎಂಆರ್​ಸಿಎಲ್​ ತಿಮಾರ್ನಿಸಿದೆ. ಬಿಎಂಆರ್​ಸಿಎಲ್​ ಅಧಿಕಾರಿಗಳು ಪರಿಸರ ಹೋರಾಟಗಾರರ ಸಭೆ ಕರೆದು ಮಾತುಕತೆ ನಡೆಸಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ 11 ಸಾವಿರ ಮರಗಳನ್ನು ಕಡಿಯಲು ಸಿದ್ಧತೆ ಮಾಡಿದ್ದ ಬಿಎಂಆರ್​ಸಿಎಲ್​ ಕಿತ್ತಳೆ ಮಾರ್ಗಕ್ಕಾಗಿ 6,500 ಮರಗಳನ್ನು ಕಡಿಯಲು ಮುಂದಾಗಿದೆ.