ರಾಯಚೂರು ಮೆಥೋಡಿಸ್ಟ್ ಚರ್ಚ್ ಮತ್ತು ಬಾಲ್ಡ್ ವಿನ್ ಶಾಲಾ ವಿದ್ಯಾಸಂಸ್ಥೆಯ ಮಾಜಿ ಮುಖ್ಯಸ್ಥ ಎನ್.ಎಲ್. ಕರ್ಕರೆ ವಿರುದ್ಧ ಶನಿವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಮೆಥೋಡಿಸ್ಟ್ ಚರ್ಚ್ ಇನ್ ಇಂಡಿಯಾ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಸ್ಟೇಷನ್ ವೃತ್ತದ ಬಾಬು ನವಜೀವನ ರಾಮ್ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಹೈಕೋರ್ಟ್ ತಡೆಯಾe್ಞÉ ಇದ್ದರೂ ಕೂಡ ಬಿಷಪ್ ಆಗಿ ಮುಂದುವರಿಯಲು ಪ್ರಯತ್ನಿಸುತ್ತಿದ್ದಾರೆ.
ಅವರ ವಿರುದ್ಧ ೨೧೦ಕ್ಕೂ ಹೆಚ್ಚು ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ" ಎಂದು ಆರೋಪಿಸಿದರು. ಎಲ್.ಎನ್. ಕರ್ಕರೆ ಅವರು ಸುಮಾರು ಕೋಟ್ಯಾಂತರ ರೂ.ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ದೂರಿದರು. ಅವರ ನಡವಳಿಕೆಯಿಂದ ಚರ್ಚ್ ಹಾಗೂ ಶೈಕ್ಷಣಿಕ ಸಂಸ್ಥೆಗಳಿಗೆ ಭಾರಿ ನಷ್ಟ ಉಂಟಾಗಿದೆ. ಮೆಥೋ ಡಿಸ್ಟ್ ಚರ್ಚ್ನ ಇತರ ಬಿಷಪ್‌ಗಳು ಗೌರವಯುತವಾಗಿ ನಿವೃತ್ತರಾಗಿದ್ದರೆ, ಕರ್ಕರೆ ಮಾತ್ರ ಹುದ್ದೆಯನ್ನು ಬಿಡಲು ನಿರಾಕರಿಸುತ್ತಿದ್ದಾರೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸ ದಂತೆ ಒತ್ತಾಯಿಸಿದರು.
ಈ ವೇಳೆ ಮೆಥೋಡಿಸ್ಟ್ ಚರ್ಚ್ನ ಮುಖ್ಯಸ್ಥ .ಎ. ಸಿಮೆಯೋನ್ ಮಾತನಾಡಿ, ಎಲ್ ಎನ್ ಕರ್ಕರೆ ೨೦೧೬ ರಿಂದ ೨೦೨೫ರವರೆಗೆ ಬಾಲ್ಡ್ವಿನ್ ಮೆಥೋಡಿಸ್ಟ್ ಚರ್ಚ್ ಶೈಕ್ಷಣಿಕ ಸಂಸ್ಥೆಗಳಿಗೆ ಅಧ್ಯಕ್ಷರಾಗಿದ್ದರು, ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ, ಅವರು ಈಗಾಗಲೇ ನಿವೃತ್ತಿ ಹೊಂದಿದ್ದರೂ ಸಹ ಅವರೇ ಮುಂದುವರೆ ಸಿದ್ದಾರೆ ಎಂದು ದೂರಿದರು. ಸಂಸ್ಥೆಯ ಆಸ್ಪತ್ರೆ, ಶಾಲೆಗಳು, ಅನಽಕೃತವಾಗಿ ಸಿಬ್ಬಂದಿಗಳ ನೇಮಕ ಮಾಡಿದ್ದಾರೆ,
ಸಂಸ್ಥೆ ನಿಽಯಿಂದ ಕೋಟ್ಯಾಂತರ ಆಸ್ತಿಯನ್ನು ಖರೀದಿ ಮಾಡಿದ್ದಾರೆ, ಹಿಂದಿನ ಪ್ರಾದೇಶಿಕ ಸಮ್ಮೇಳನದ ನಿಽಯನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆಪಾದಿಸಿದರು. ಎಲ್‌ಎನ್ ಕರ್ಕರೆ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕು, ಸಂಸ್ಥೆಯ ನಿಽಯನ್ನು ದುರುಪಯೋಗ ಪಡಿಸಿಕೊಂಡಿದ್ದು, ಹಿಂಪಡೆಯಬೇಕು, ಅವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮೆಥೋಡಿಸ್ಟ್ ಚರ್ಚ್ನ ಅಬ್ರಹಾಂ ಜೋಹಾನ್, ಸ್ಯಾಮ್ಸಸನ್ ಡ್ಯಾನಿಯಲ್, ಲೇಕ್ ಸುರೇಂದ್ರ, ಆಗಸ್ಟಿನ್ ಆಶೀರ್ವಾದಂ, ಪುಟ್ಟರಾಜ್ ಆಲ್ಬರ್ಟ್, ರುಬೇನ್ ಲಕ್ಷ್ಮಿಯ್ಯ, ಎಸ್ ನಂದಾ ಕುಮಾರ,
ಪ್ರಮೋದ್ ಸ್ಯಾಮ್ಯುಯಲ್, ಸಿಮೋನ್ ರಾಜ್, ವಿವೇಕಾನಂದ, ಜ್ಞಾನಮಿತ್ರ, ಶಾಂತರಾಜ್, ಜಯವಂತ, ಸೇರಿದAತೆ ಅನೇಕರು ಇದ್ದರು.