ವಿಜಯವಾಣಿ ಸುದ್ದಿಜಾಲ ಕಡಬ
ಬೆಳಂದೂರು ಗ್ರಾಪಂ ಸಾಮಾನ್ಯ ಸಭೆ ಗ್ರಾಪಂ ಅಧ್ಯಕ್ಷೆ ತೇಜಾಕ್ಷಿ ಕೊಡಂಗೆ ಅಧ್ಯಕ್ಷತೆಯಲ್ಲಿ ಗ್ರಾಪಂ ಸಭಾಂಗಣದಲ್ಲಿ ನಡೆಯಿತು.
ಪಂಚಾಯಿತಿ ವ್ಯಾಪ್ತಿಯ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ತುರ್ತು ಕ್ರಮ ಕೈಗೊಳ್ಳುವುದು. ತಗುಲುವ ವೆಚ್ಚವನ್ನು ಪಂಚಾಯಿತಿ ನೀರಿನ ಶುಲ್ಕ ವಸೂಲಾತಿಯಿಂದ ಭರಿಸುವಂತೆ ನಿರ್ಣಯ ಕೈಗೊಳ್ಳಲಾಯಿತು.
ನೀರು ಸರಬರಾಜು ಬಳಕೆದಾರರು ಕಡ್ಡಾಯವಾಗಿ ಮೀಟರ್ ಅಳವಡಿಸುವಂತೆ, ಮೀಟರ್ ರೀಡಿಂಗ್ ಪ್ರಕಾರ ವಸೂಲು ಮಾಡುವಂತೆ ತೀರ್ಮಾನಿಸಲಾಯಿತು. ಕುಡಿಯುವ ನೀರಿನ ಸಮಿತಿ ಸಭೆಗಳನ್ನು ಗ್ರಾಮವಾರು ಪಂಚಾಯಿತಿ ಕಚೇರಿಯಲ್ಲಿ ನಡೆಸಲು ತೀರ್ಮಾನಿಸಲಾಯಿತು. ಜಲಜೀವನ್ ಯೋಜನೆಯಡಿ ಕೈಗೊಳ್ಳಲಾದ ಕಾಮಗಾರಿ ಬಗ್ಗೆ ಚರ್ಚಿಸಿ ಸದ್ರಿ ಕಾಮಗಾರಿಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರುವಂತೆ ತೀರ್ಮಾನಿಸಲಾಯಿತು.
ಗ್ರಾಪಂ ಉಪಾಧ್ಯಕ್ಷ ಜಯಂತ ಅಬೀರ, ಸದಸ್ಯರಾದ ಜಯರಾಮ ಬೆಳಂದೂರು, ಪಾರ್ವತಿ ಮರಕ್ಕಡ, ಮೋಹನ್ ಅಗಳಿ, ವಿಠಲ ಗೌಡ ಅಗಳಿ, ಪ್ರವೀಣ್ ಕೆರೆನಾರು, ಹರಿಣಾಕ್ಷಿ ಬನಾರಿ, ಕುಸುಮಾ ಅಂಕಜಾಲು, ಗೀತಾ ಕುವೆತ್ತೋಡಿ, ತಾರಾ ಅನ್ಯಾಡಿ, ಗೌರಿ ಮಾದೋಡಿ, ಉಮೇಶ್ವರಿ ಅಗಳಿ ಉಪಸ್ಥಿತರಿದ್ದರು. ಪಿಡಿಒ ನಾರಾಯಣ್ ಸಭೆ ನಿರ್ವಹಿಸಿದರು. ಲೆಕ್ಕ ಸಹಾಯಕಿ ಸುನಂದಾ ಇಲಾಖೆ ಸುತ್ತೋಲೆ, ಸಾರ್ವಜನಿಕ ಅರ್ಜಿ ಓದಿದರು.
ಲೆಕ್ಕಾಧಿಕಾರಿ ಕೇಂದ್ರ ಸ್ಥಾನದಲ್ಲಿರಲಿ
ಗ್ರಾಮ ಲೆಕ್ಕಾಧಿಕಾರಿ ವಾರದ ಎರಡು ದಿನವಾದರೂ ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು, ಸಾರ್ವಜನಿಕರಿಗೆ ಲಭ್ಯವಿರುವಂತೆ ಉಪಾಧ್ಯಕ್ಷ ಜಯಂತ ಅಬೀರ ಹೇಳಿದರು. ಸದಸ್ಯರು ಧ್ವನಿಗೂಡಿಸಿದರು. ಈ ಬಗ್ಗೆ ಗ್ರಾಮ ಲೆಕ್ಕಾಧಿಕಾರಿಯವರ ಗಮನಕ್ಕೆ ತರುವಂತೆ ನಿರ್ಣಯಿಸಲಾಯಿತು.