ಜಿಲ್ಲೆ

ಮೀಟರ್ ಬಡ್ಡಿ ವಸೂಲಿಗಾರರು ಅಂದರ್

ವೀರೇಶ ಸೌದ್ರಿ

ಮುಂಡಗೋಡ: ಮೀಟರ್ ಬಡ್ಡಿ ಸಾಲ ವಸೂಲಿ ವೇಳೆ ವ್ಯಕ್ತಿಯೊಬ್ಬನಿಗೆ ಜೀವ ಬೆದರಿಕೆ ಹಾಕಿದ ಆರೋಪದಡಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಟ್ಟಣದ ಅಂಬೇಡ್ಕರ್ ಓಣಿಯ ಅಭಿಷೇಕ ಕೊರವರ ಹಾಗೂ ಶಶಿಕಾಂತ ಕೊರವರ ಬಂಧಿತ ಆರೋಪಿಗಳು.

ಘಟನೆಯ ವಿವರ:

ತಾಲೂಕಿನ ಬಾಳೆಹಳ್ಳಿ ನಿವಾಸಿ ನಾಗಮೂರ್ತಿ ನಾಗರಾಜ ಅಗ್ರಗೋಣ ಎಂಬವರು ಆರೋಪಿಗಳಿಂದ ಸಾಲ ಪಡೆದಿದ್ದರು. ನ.25ರಂದು ಆರೋಪಿಗಳು ಬಾಳೆಹಳ್ಳಿಯ ಶುಂಠಿ ಹೊಲದಲ್ಲಿ ಕೆಲಸಮಾಡುತ್ತಿದ್ದ ನಾಗಮೂರ್ತಿ ಅವರ ಬಳಿ ತೆರಳಿ ಬಡ್ಡಿ ಹಾಗೂ ಅಸಲು ಸೇರಿ ಅರವತ್ತು ಸಾವಿರ ರೂ. ಕೊಡುವಂತೆ ಎಂದು ಕೇಳಿದ್ದಾರೆ.

ಹಣ ಇಲ್ಲ ಎಂದಾಗ ಅವಾಚ್ಯ ಶಬ್ದಗಳಿಂದ ಬೈದು, ಹಣ ಕೊಡದಿದ್ದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುವ ಕುರಿತು ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಆರೋಪಗಳಿಗೆ ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.