ಹಾವೇರಿ: ಫೋನ್ಗೆ ಮೆಸೆಂಜರ್ ಮೂಲಕ ಲಿಂಕ್ವೊಂದನ್ನು ಕಳುಹಿಸಿ ಇದರಲ್ಲಿ ಹೂಡಿಕೆ ಮಾಡಿದರೆ ಶೇ. 5ರಷ್ಟು ಲಾಭಾಂಶ ದೊರೆಯಲಿದೆ ಎಂದು ನಂಬಿಸಿ ವ್ಯಕ್ತಿಯೊಬ್ಬರಿಗೆ 7.55 ಲಕ್ಷ ರೂ. ವಂಚಿಸಿರುವ ಕುರಿತು ಇಲ್ಲಿಯ ಸೈಬರ್ ಕ್ರೆೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿಗ್ಗಾಂವಿ ತಾಲೂಕಿನ ಸುಂಕದಕೇರಿ ನಿವಾಸಿ ಬಾಬುರಾವ್ ಪ್ರಕಾಶ ಹಂಡೆ (26) ಎಂಬುವರಿಗೆ ಮೋಸ ಮಾಡಿರುವುದು.
ಇವರ ಫೋನ್ಗೆ ಬಿಟೆನಎಕ್ಸಚೆಂಜ್ ಎಂಬ ಲಿಂಕ್ವೊಂದನ್ನು ಕಳುಹಿಸಿ, ಇದರಲ್ಲಿ ಹೂಡಿಕೆ ಮಾಡಿದರೆ ಶೆ. 5ರಷ್ಟು ಲಾಭಾಂಶ ಕೊಡುವುದಾಗಿ ನಂಬಿಸಿದ್ದಾರೆ. ಅದರಂತೆ ಬಾಬುರಾವ್ 7.55 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ಆದರೆ, ಅವರಿಗೆ ಲಾಭಾಂಶ ಹಾಗೂ ಅಸಲು ಕೂಡ ನೀಡದೆ ಮೋಸ ಮಾಡಿದ್ದಾರೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.