ಇಂಡಿ ಪಟ್ಟಣದ ಮಹರ್ಷಿ ವಾಲ್ಮೆಕಿ ಭವನದಲ್ಲಿ ಮಹರ್ಷಿ ವಾಲ್ಮೆಕಿ ಜಯಂತಿ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ಸದಾನಂದ ಈರನಕೇರಿ, ಲಿಂಬಾಜಿ ರಾಠೋಡ, ತಹಸೀಲ್ದಾರ್ ಬಿ.ಎಸ್.ಕಡಕಭಾವಿ ಇತರರಿದ್ದರು. 
ಜಿಲ್ಲೆ

ಸುಖಿ ಸಮಾಜದ ಸಂದೇಶ ಮಹಾತ್ಮ

ಇಂಡಿ: ಜಾತಿ ರಹಿತ, ವರ್ಗರಹಿತ, ಶೋಷಣೆರಹಿತ, ಸಮಪಾಲು- ಸಮಬಾಳು ಸಮಾನ ಅವಕಾಶದ ಸುಖಿ ಸಮಾಜದ ಸಂದೇಶಗಳನ್ನು ವಾಲ್ಮೀಕಿ ಮಹರ್ಷಿಗಳು ಜಗಕ್ಕೆ ಸಾರಿದ್ದಾರೆ ಎಂದು ಉಪನ್ಯಾಸಕ ಸದಾನಂದ ಈರನಕೇರಿ ಹೇಳಿದರು.

ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಮಹರ್ಷಿ ವಾಲ್ಮೆಕಿ ಭವನದಲ್ಲಿ ಗುರುವಾರ ಮಹರ್ಷಿ ವಾಲ್ಮೆಕಿ ಜಯಂತಿ ಕಾರ್ಯಕ್ರಮ ಅವರು ಮಾತನಾಡಿದರು.

ರಾಮಾಯಣದಲ್ಲಿರುವ ಮೌಲ್ಯಗಳನ್ನು ಇಂದಿನ ಜನಾಂಗ ಅಳವಡಿಸಿಕೊಳ್ಳಬೇಕು, ಅದನ್ನು ಓದುವುದರಿಂದ ಜೀವನ ಬದಲಾವಣೆಯಾಗುತ್ತದೆ ಎಂದರು.

ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರ ಸಂದೇಶವನ್ನು ಪಾಲಿಸೋಣ, ಸಮಾಜಕ್ಕೆ ಸಾರೋಣ, ಹಿಂಸಾಚಾರರಹಿತ ಸುಖಿ ಸಮಾಜವನ್ನು ನಿರ್ಮಿಸೋಣ ಎಂದರು.

ತಹಸೀಲ್ದಾರ್ ಬಿ.ಎಸ್.ಕಡಕಭಾವಿ ಮಾತನಾಡಿ, ವಾಲ್ಮೀಕಿ ಅವರು ಹೇಳಿದ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಈ ಉತ್ಸವ ಸಾರ್ಥಕವಾದಂತೆ ಎಂದರು. ಪಿಯು, ಎಸ್ಸೆಸ್ಸೆಲ್ಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಸಮಾಜಕಲ್ಯಾಣ ಅಧಿಕಾರಿ ಉಮೇಶ ಲಮಾಣಿ, ರಾಜಶೇಖರ ದಯವಾಡಗಿ ಮಾತನಾಡಿದರು. ಧನರಾಜ್ ಮುಜಗೊಂಡ, ಪ್ರಾಚಾರ್ಯ ಪ್ರಕಾಶ ಸಣ್ಣಮನಿ, ಸಂಜು ನಾಯ್ಕೋಡಿ, ಹೆಸ್ಕಾಂ ಎಇಇ ಎಸ್.ಆರ್.ಮೇಡೆದಾರ, ಲಕ್ಷ್ಮೀಬಾಯಿ ನಾಯ್ಕೋಡಿ ಇತರರಿದ್ದರು.