ಜಿಲ್ಲೆ

ಕುಸಿದು ಬಿದ್ದು ಪವರ್‌ಮನ್ ಮೃತ್ಯು

Mangaluru - Desk - Rajesh Shetty

ಪುತ್ತೂರು ಗ್ರಾಮಾಂತರ: ಕೆಲ ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದ ಕುರಿಯ ಗ್ರಾಮದ ಇಡಬೆಟ್ಟು ಸಮೀಪದ ಕುಂಡಕೋರಿ ನಿವಾಸಿ, ಕುಂಬ್ರ ಮೆಸ್ಕಾಂ ಕೇಂದ್ರದಲ್ಲಿ ಪವನ್‌ಮನ್ ಆಗಿದ್ದ ಉಮೇಶ್ ಕುಂಡಕೋರಿ(42) ಎಂಬುವರು ಸೋಮವಾರ ರಾತ್ರಿ ಮನೆಯೊಳಗೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಕೆಲದಿನಗಳ ಹಿಂದೆ ಅನಾರೋಗ್ಯಕ್ಕೊಳಗಾಗಿದ್ದರು. ಕುಸಿದು ಬಿದ್ದು ಗಾಯಗೊಂಡಿದ್ದರು. ತಲೆಯ ಭಾಗಕ್ಕೆ ಗಾಯವಾಗಿದ್ದ ಅವರನ್ನು ಚಿಕಿತ್ಸೆಗಾಗಿ ಪುತ್ತೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.