ಜಿಲ್ಲೆ

ಮೆಸ್ಕಾಂ ಕಚೇರಿ ಸ್ಥಳಾಂತರವಾದರೆ ಪ್ರತಿಭಟನೆ - ರೈತ ಸಂಘ ಹಸಿರು ಸೇನೆ ಎಚ್ಚರಿಕೆ

Mangaluru - Nishantha Narayana

ಪುತ್ತೂರು: ಮೆಸ್ಕಾಂ ವಿಟ್ಲ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿ, ಕಾರ್ಯ ಮತ್ತು ಪಾಲನೆ ಉಪವಿಭಾಗವನ್ನು ಸರ್ಕಾರಿ ಬಸ್ ನಿಲ್ದಾಣದ ಸಮೀಪದ ಕಟ್ಟಡದಿಂದ ಚಂದಳಿಕೆಗೆ ವರ್ಗಾವಣೆ ಮಾಡುವುದಕ್ಕೆ ಕರ್ನಾಟಕ ರೈತ ಸಂಘ ಹಸಿರು ಸೇನೆ ವಿರೋಧ ವ್ಯಕ್ತಪಡಿಸಿ ಮೆಸ್ಕಾಂ ಆಡಳಿತ ನಿರ್ದೇಶಕರಿಗೆ ಪತ್ರ ಬರೆದಿದೆ.


ವರ್ಷದ ಹಿಂದೆ ನಡೆದ ಜನ ಸಂಪರ್ಕ ಸಭೆಯಲ್ಲಿ ಕೆಪಿಟಿಸಿಎಲ್ ಕಚೇರಿ ಸಮೀಪದಲ್ಲಿರುವ ೧೦ ಸೆಂಟ್ಸ್ ಜಾಗವನ್ನು ಪಡೆದು ಮೆಸ್ಕಾಂ ಸ್ವಂತ ಕಟ್ಟಡ ನಿರ್ಮಾಣ ಮಾಡಬೇಕೆಂಬ ಬೇಡಿಕೆಯನ್ನು ಇಡಲಾಗಿತ್ತು. ಆದರೆ ಸದ್ಯ ವಿಟ್ಲ ಪೇಟೆಯಿಂದ ಹೊರ ಭಾಗದಲ್ಲಿರುವ ಚಂದಳಿಕೆ ಸಮೀಪಕ್ಕೆ ಕಚೇರಿಯನ್ನು ವರ್ಗಾವಣೆ ಮಾಡಲು ಮುಂದಾಗಿರುವುದು ಗ್ರಾಹಕರಿಗೆ ಅನನುಕೂಲವಾಗಿ ಪರಿಣಮಿಸಲಿದೆ.


ಸ್ವಂತ ಕಟ್ಟಡ ನಿರ್ಮಾಣವಾಗುವ ತನಕ ಈಗ ಇರುವ ಕಚೇರಿಯಲ್ಲೇ ಕಾರ್ಯನಿರ್ವಹಿಸಬೇಕು ಅಥವಾ ಪೇಟೆಯ ಆಸುಪಾಸಿನಲ್ಲಿರುವ ಕಟ್ಟಡದಲ್ಲಿ ಗ್ರಾಹಕರಿಗೆ ಸುಲಭವಾಗಿ ಸಿಗುವಂತೆ ಕಚೇರಿ ಮಾಡಬೇಕು. ಸ್ಥಳಾಂತರಿಸಿದರೆ ರೈತ ಸಂಘ ಜಿಲ್ಲಾ ಸಮಿತಿ, ವಿಟ್ಲ ಗ್ರಾಹಕರು, ಹಾಗೂ ವಿವಿಧ ಒಕ್ಕೂಟದಿಂದ ಬೃಹತ್ ಪ್ರತಿಭಟನೆಯನ್ನು ನಡೆಸಬೇಕಾಗುತ್ತದೆ ಎಂಬ ಎಚ್ಚರಿಸಲಾಗಿದೆ.


ಸಭೆಯಲ್ಲಿ ಪ್ರಸ್ತಾಪ
ಜಿಲ್ಲಾಡಳಿತದಲ್ಲಿ ನಡೆದ ರೈತರ ಸಭೆಯಲ್ಲಿ ಕಚೇರಿ ಸ್ಥಳಾಂತರ ವಿಚಾರವನ್ನು ರೈತ ಸಂಘ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಪ್ರಸ್ತಾಪ ಮಾಡಿದ್ದು, ಮೆಸ್ಕಾಂ ಅಽಕಾರಿಗಳು ಅದನ್ನು ಹಿಂಪಡೆಯುವ ಭರವಸೆ ನೀಡಿದ್ದಾರೆ. ೪೦೦ ಕೆವಿ ವಿದ್ಯುತ್ ಪ್ರಸರಣ ಮಾರ್ಗದ ವಿಚಾರದಲ್ಲಿ ರೈತರು ಕಾನೂನು ಕೈಗೆತ್ತಿಕೊಳ್ಳಬಾರದು. ಕಂಪನಿಯವರು ರೈತರ ಭೂಮಿಗೆ ನೇರವಾಗಿ ಹೋಗದಂತೆ ಜಿಲ್ಲಾಽಕಾರಿ ಮುಲ್ಲೈ ಮುಗಿಲನ್ ಸೂಚನೆ ನೀಡುವುದಾಗಿ ತಿಳಿಸಿದ್ದಾರೆ.


ಸ್ವಂತ ಕಟ್ಟಡದ ಬೇಡಿಕೆ
ವಿಟ್ಲ ಉಪವಿಭಾಗ ಕಚೇರಿ ಸ್ವಂತ ಕಟ್ಟಡಕ್ಕೆ ವಿಚಾರವನ್ನು ಜನಸಂಪರ್ಕ ಸಭೆಯಲ್ಲಿ ಸಾಮಾಜಿಕ ಹೋರಾಟಗಾರ ವೆಂಕಟ್ರಮಣ ಪುಣಚ ಪ್ರಸ್ತಾಪ ಮಾಡಿದ್ದು, ೨೦೨೩ ನ.೩ರಂದು ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತ ಬಂಟ್ವಾಳ ತಹಸೀಲ್ದಾರರಿಗೆ ಪತ್ರ ಬರೆದು ಸ್ವಂತ ಕಟ್ಟಡ ನಿರ್ಮಾಣಕ್ಕೆ ಜಮೀನು ವದಗಿಸುವಂತೆ ಕೇಳಿಕೊಂಡಿದ್ದರು. ೫೮ ಸಾವಿರಕ್ಕೂ ಅಽಕ ಗ್ರಾಹಕರನ್ನು ಹೊಂದಿದ್ದು, ದಿನದಿಂದ ದಿನಕ್ಕೆ ಗ್ರಾಹಕರ ಸಂಖ್ಯೆ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ವ್ಯವಸ್ಥೆ ಕಲ್ಪಿಸಲು ಸ್ವಂತ ಕಟ್ಟಡದ ಅಗತ್ಯ ಇದೆ ಎಂದು ಹೇಳುವ ಜತೆಗೆ ಎರಡು ಸರ್ವೇ ನಂಬರ್‌ಗಳನ್ನು ಉಲ್ಲೇಖಿಸಲಾಗಿದೆ. ೨೦೨೩ ಅ.೧೦ರಂದು ಕಾರ್ಯನಿರ್ವಾಹಕ ಇಂಜಿನಿಯರ್‌ಗೆ ಪತ್ರ ಬರೆಯಲಾಗಿತ್ತು.