ಜಿಲ್ಲೆ

ಸಮಸ್ಯೆ ಬಗೆಹರಿಸಲು ಸರ್ವ ಪ್ರಯತ್ನ : ಶಾಸಕಿ ಭಾಗೀರಥಿ ಮುರುಳ್ಯ ಭರವಸೆ

ಸೌಮ್ಯ ಆರ್

ಸುಳ್ಯ: ತಾಲೂಕಿನ 110ಕೆವಿ ಟವರ್, ಲೈನ್ ನಿರ್ಮಾಣಕ್ಕೆ ಸಾರ್ವಜನಿಕರಿಂದ ಅಡ್ಡಿ ಉಂಟಾಗಿರುವ ಕುರಿತು ಚರ್ಚೆ ನಡೆಸಿದ್ದು, ಶೀಘ್ರ ಕಾಮಗಾರಿ ಮುಗಿಸಲು ಎಲ್ಲ ಪ್ರಯತ್ನ ಮಾಡಲಾಗುವುದು ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ.

ಸುಳ್ಯದ ವಿದ್ಯುತ್ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಜಯಕುಮಾರ್ ಸಭೆಯಲ್ಲಿ ಭರವಸೆ ನೀಡಿದರು.

ವಿದ್ಯುತ್ ಸಮಸ್ಯೆ ಬಗ್ಗೆ ಶಾಸಕಿ ಭಾಗೀರಥಿ ಮುರುಳ್ಯ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದರು. ಇಂಧನ ಸಚಿವ ಕೆ.ಜೆ.ಜಾರ್ಜ್ ಅವರನ್ನು ಭೇಟಿ ಮಾಡಿ ಅವರ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆ ಸುಳ್ಯಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರು ಮೆಸ್ಕಾಂ ಎಂಡಿಗೆ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಸಭೆ ನಡೆಸಲಾಯಿತು.

ದುಗಲಡ್ಕ, ಉಬರಡ್ಕ ಗ್ರಾಮಗಳನ್ನು ಜಾಲ್ಸೂರು ಸೆಕ್ಷನ್‌ಗೆ ಸೇರ್ಪಡೆ ಮಾಡಿರುವುದಕ್ಕೆ ಜನರ ವಿರೋಧ ಇದೆ. ಈ ಪ್ರದೇಶಗಳನ್ನು ಸುಳ್ಯ ಕಚೇರಿ ವ್ಯಾಪ್ತಿಯಲ್ಲಿ ಇರಿಸಬೇಕು ಎಂದು ನಪಂ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ನಗರಸಭೆ ಗಮನಕ್ಕೆ ತಂದರು ಈ ಕುರಿತು ಕ್ರಮ ಕೈಗೊಳ್ಳಲು ಎಂಡಿ ಇಂಜಿನಿಯರ್‌ಗಳಿಗೆ ಸೂಚಿಸಿದರು.

ಮಳೆಗಾಲಕ್ಕೆ ಮುನ್ನವೇ ಟ್ರೀ ಕಟ್ಟಿಂಗ್ ಕೆಲಸ ಪೂರ್ತಿ ಮಾಡಬೇಕು ಎಂದು ಅರಂತೋಡು ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಹೇಳಿದರು.

110 ಕೆವಿ ಸಬ್ ಸ್ಟೇಷನ್ ಅನುಷ್ಠಾನ ಆಗದೆ ಸುಳ್ಯದ ವಿದ್ಯುತ್ ಸಮಸ್ಯೆ ಶಾಶ್ವತ ಪರಿಹಾರ ಅಸಾಧ್ಯ ಈ ಹಿನ್ನಲೆಯಲ್ಲಿ 110 ಕೆವಿ ಸಬ್‌ಸ್ಟೇಷನ್ ಕಾಮಗಾರಿ ಕೂಡಲೇ ಮುಗಿಸಲು ಹೆಚ್ಚು ಒತ್ತು ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.

ಮೆಸ್ಕಾಂ ಎಂಡಿ ಜಯಕುಮಾರ್ ಮಾಹಿತಿ ನೀಡಿ 110 ಕೆವಿ ವಿದ್ಯುತ್ ಲೈನ್ ಟವರ್, ಲೈನ್ ನಿರ್ಮಾಣಕ್ಕೆ ಸಾರ್ವಜನಿಕರಿಂದ ವಿರೋಧ ಇರುವುದರಿಂದ ಟವರ್ ನಿರ್ಮಾಣ ಕಾಮಗಾರಿ ವಿಳಂಬವಾಗಿದೆ ಎಂದರು. 21 ಕಿ.ಮೀ. ಉದ್ದದ 110 ಕೆವಿ ಲೈನ್‌ನಲ್ಲಿ 89 ಟವರ್ ನಿರ್ಮಾಣ ಆಗಬೇಕಾಗಿದ್ದು, ಕೇವಲ 7 ಟವರ್ ಮಾತ್ರ ಆಗಿದೆ. ಇದರಲ್ಲಿ 8 ಕಿ.ಮೀ. ಅರಣ್ಯ ವ್ಯಾಪ್ತಿಯಲ್ಲಿ 34 ಟವರ್ ನಿರ್ಮಾಣ ಆಗಬೇಕಾಗಿದೆ. ಅರಣ್ಯದಲ್ಲಿ ಮರ ಕಡಿಯುವುದಕ್ಕೆ ಪರಿಹಾರವಾಗಿ 10 ಕೋಟಿ ರೂ. ಕಟ್ಟಲಾಗಿದೆ. ಉಳಿದ ಕಡೆ 49 ಟವರ್ ನಿರ್ಮಾಣಕ್ಕೆ, ಲೈನ್ ಎಳೆಯಲು ರೈತರು, ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕಿ, ಎಲ್ಲೆಲ್ಲ ವಿರೋಧ ಇದೆ ಎಂಬ ಪಟ್ಟಿ ನೀಡಿ, ಸರ್ವ ಪಕ್ಷಗಳ ಮುಖಂಡರು, ಪ್ರಮುಖರನ್ನು ಸೇರಿಸಿ ರೈತರಲ್ಲಿ ಮಾತುಕತೆ ನಡೆಸುವ ಪ್ರಯತ್ನ ನಡೆಸಲಾಗುವುದು ಎಂದು ಶಾಸಕರು ಹೇಳಿದರು.

ಗುತ್ತಿಗಾರು ಗ್ರಾಪಂ ಸದಸ್ಯ ವೆಂಕಟ್ ವಳಲಂಬೆ, ಮೆಸ್ಕಾಂ ಮಂಗಳೂರು ವಲಯ ಮುಖ್ಯ ಇಂಜಿನಿಯರ್ ರವಿಕಾಂತ್ ಆರ್ ಕಾಮತ್, ಮೆಸ್ಕಾಂ ಮಂಗಳೂರು ವೃತ್ತ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್ ಕೆ, ಕೆಪಿಟಿಸಿಎಲ್ ಮಂಗಳೂರು ಅಧೀಕ್ಷಕ ಇಂಜಿನಿಯರ್ ಚೈತನ್ಯ, ಪುತ್ತೂರು ವಿಭಾಗ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ, ಸುಳ್ಯ ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ್ ನಾಯ್ಕ ಮತ್ತಿತರರು ಮಾತನಾಡಿದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ ಸ್ವಾಗತಿಸಿದರು. ಅರಂತೋಡು ಗ್ರಾಪಂ ಅಧ್ಯಕ್ಷ ಕೇಶವ ಅಡ್ತಲೆ, ನಗರ ಪಂಚಾಯಿತಿ ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಸುಬೋದ್ ಶೆಟ್ಟಿ ಮೇನಾಲ, ಸುನೀಲ್ ಕೇರ್ಪಳ, ಬಪ್ರಸಾದ್ ಕಾಟೂರು, ಚಂದ್ರಶೇಖರ ನೆಡಿಲ್, ತಾಪಂ ವ್ಯವಸ್ಥಾಪಕ ಹರೀಶ್ ಕೆ. ಮತ್ತಿತರರು ಉಪಸ್ಥಿತರಿದ್ದರು.

ಗುತ್ತಿಗಾರಿನಲ್ಲಿ 33 ಕೆವಿ ಸಬ್‌ಸ್ಟೇಷನ್ ಆದರೂ ಒಂದು ಫೀಡರ್ ಮಾತ್ರ ಚಾಲೂ ಆಗಿದ್ದು ಉಳಿದ ಫೀಡರ್‌ಗಳು ಚಾಲೂ ಆಗದೆ ವಿದ್ಯುತ್ ಸಮಸ್ಯೆ ತೀವ್ರಗೊಂಡಿದೆ ಎಂದರು. ಉಳಿದ ಫೀಡರ್‌ಗಳ ಕಾರ್ಯಾರಂಭ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು. ವೆಂಕಟ್ ವಳಲಂಬೆ, ಗುತ್ತಿಗಾರು ಗ್ರಾಪಂ ಸದಸ್ಯ https://www.vijayavani.net/national-conference-2 https://www.vijayavani.net/pressmeet-47