ಉಡುಪಿ: ನಿಟ್ಟೂರು ನಿವಾಸಿಯೊಬ್ಬರಿಗೆ ಹಿಂದಿನ ಬಾಕಿ ಇರುವ ವಿದ್ಯುತ್ ಬಿಲ್ ಕೂಡಲೇ ಪಾವತಿಸುವಂತೆ ಕರೆ ಮಾಡಿದ ಅಪರಿಚಿತ ವ್ಯಕ್ತಿ 1.79 ಲಕ್ಷ ರೂ. ವಂಚಿಸಿದ ಘಟನೆ ನಡೆದಿದೆ.
ಗುರುರಾಜ ಭಟ್ ವಂಚನೆಗೆ ಒಳಗಾದವರು. ಇವರಿಗೆ ಗುರುವಾರ ಬೆಳಗ್ಗೆ ಬೇರೆ ಬೇರೆ ಸಂಖ್ಯೆಗಳಿಂದ ಕರೆ ಮಾಡಿದ ವ್ಯಕ್ತಿ ತಾನು ಮೆಸ್ಕಾಂ ಅಧಿಕಾರಿ ಎಂದು ಹೇಳಿ, ಹಿಂದಿನ ಬಾಕಿ ಇರುವ ಕರೆಂಟ್ ಬಿಲ್ಲನ್ನು ಈ ಕೂಡಲೇ ಕಟ್ಟಬೇಕು ಎಂದು ಹೇಳಿ, ಒಟಿಪಿ ಪಡೆದು 2 ಬ್ಯಾಂಕ್ ಖಾತೆಗಳಿಂದ ಒಟ್ಟು ರೂ. 1,79,130 ಹಣವನ್ನು ಆನ್‌ಲೈನ್ ಮುಖೇನ ವರ್ಗಾಯಿಸಿಕೊಂಡು ನಷ್ಟ ಉಂಟು ಮಾಡಿದ್ದಾನೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.