ಕಂಪ್ಲಿಯ ಅಂಬೇಡ್ಕರ್ ವೃತ್ತದಲ್ಲಿ ನವ ಕರ್ನಾಟಕ ಯುವಶಕ್ತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.  
ಜಿಲ್ಲೆ

ಎಂಇಎಸ್, ಶಿವಸೇನೆ ನಿಷೇಧಿಸಿ: ಕಂಪ್ಲಿಯಲ್ಲಿ ನವಕರ್ನಾಟಕ ಯುವಶಕ್ತಿ ಸಂಘಟನೆ ಪ್ರತಿಭಟನೆ

ಕಂಪ್ಲಿ: ರಾಜ್ಯದಲ್ಲಿ ಸಾಮರಸ್ಯಕ್ಕೆ ಭಂಗ ತರುತ್ತಿರುವ ಎಂಇಎಸ್ ಹಾಗೂ ಶಿವಸೇನೆಯನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ನವಕರ್ನಾಟಕ ಯುವಶಕ್ತಿ ಕಾರ್ಯಕರ್ತರು ಗುರುವಾರ ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ನಾಡ ಕಚೇರಿಯ ಕಂದಾಯಾಧಿಕಾರಿ ಎ.ಗಣೇಶ್‌ಗೆ ಮನವಿ ಸಲ್ಲಿಸಿದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಬುರೆ ವಿರೂಪಾಕ್ಷಿ ಯಾದವ್ ಮಾತನಾಡಿ, ರಾಜ್ಯದ ಬಾವುಟ ಸುಟ್ಟು, ಸಂಗೊಳ್ಳಿ ರಾಯಣ್ಣನ ಪ್ರತಿಮೆ ಧ್ವಂಸಗೊಳಿಸಿದ್ದು, ಬಸವಣ್ಣನವರ ಪ್ರತಿಮೆಗೆ ಮಸಿ ಬಳಿದಿದ್ದು ಖಂಡನೀಯ. ತುರ್ತಾಗಿ ಆರೋಪಿಗಳನ್ನು ಪತ್ತೆ ಮಾಡಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಬಿ.ಗಂಗಾಧರ, ನವ ಕರ್ನಾಟಕ ಯುವಶಕ್ತಿ ಪದಾಧಿಕಾರಿಗಳಾದ ಎಸ್.ಗೋಪಾಲ ಯಾದವ, ಡಿ.ಎಂ.ಗೌರೀಶ್, ಜೆ.ಶಿವಕುಮಾರ್, ಯು.ದೊಡ್ಡಬಸವ, ಮಹೇಶ್, ಎಚ್.ಪ್ರಹ್ಲಾದ ನಾಯಕ, ಅಂಗಡಿ ಪ್ರವೀಣ್, ಹೊನ್ನೂರಪ್ಪ, ವೈ.ಯಲ್ಲಪ್ಪ, ಡಿ.ಮಂಜುನಾಥ, ಯು.ಹೊನ್ನೂರ ಸ್ವಾಮಿ ಇದ್ದರು.