ಜಿಲ್ಲೆ

ಅಮೃತ ಭಾರತಿ ವಿದ್ಯಾಲಯದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಹೆಬ್ರಿ

ಹೆಬ್ರಿ ಪಿ.ಆರ್.ಎನ್ ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಪೂರ್ವಿ ಎಂ.ರಾವ್, ಪ್ರತ್ಯೂಶ್, ಅನ್ವಿತಾ ನಾಯಕ್ ಅವರನ್ನು ಸನ್ಮಾನಿಸಲಾಯಿತು.

ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ರಾಜೇಶ್ ನಾಯಕ್, ವಸತಿ ನಿಲಯದ ಸದಸ್ಯ ರಾಮಕೃಷ್ಣ ಆಚಾರ್ಯ, ಸಂಸ್ಥೆಯ ಮುಖ್ಯಸ್ಥೆ ಅಪರ್ಣಾ ಆಚಾರ್, ಶಿಕ್ಷಕರಾದ ಮಹೇಶ್ ಹೈಕಾಡಿ, ವೇದವ್ಯಾಸ ತಂತ್ರಿ ಮಡಾಮಕ್ಕಿ, ಪಂಚಮಿ, ಸುಮನ್ ನಾಯಕ್, ನಿಶಾನ್ ಶೆಟ್ಟಿ, ಸುಮನಾ ವಾಣಿ, ಮೀನಾಕ್ಷಿ, ನವ್ಯಾ ಪೈ, ಸುಚಿತ್ರಾ ಮತ್ತು ವಸತಿ ನಿಲಯದ ನಿತಿನ್ ಶೆಟ್ಟಿ, ವಿರೂಪಾಕ್ಷ, ಅಂಜಲಿ, ಪಾಲಕರಾದ ಪಾರ್ವತಿ ಎಂ., ಜಿ.ಸೌಮ್ಯ ಉಪಸ್ಥಿತರಿದ್ದರು.