ಹೆಬ್ರಿ: ಬೋರ್ಡ್ ಪರೀಕ್ಷೆಯಲ್ಲಿ ರ‌್ಯಾಂಕ್, ಸಿಇಟಿ ಮತ್ತು ನೀಟ್‌ನಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಹೆಬ್ರಿಯ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಎಚ್.ಗುರುದಾಸ್ ಶೆಣೈ, ರಾಜೇಶ್ ನಾಯಕ್, ಜೆಸಿಐ ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್, ಟ್ರಸ್ಟಿಗಳಾದ ಸತೀಶ್ ಪೈ, ಸುಧೀರ್ ನಾಯಕ್, ಬಾಲಕೃಷ್ಣ ಮಲ್ಯ, ಭಾಸ್ಕರ್ ಜೋಯಿಸ್, ಹಾಸ್ಟೆಲ್ ಕಮ್ಮಿಟಿ ಗೌರವಾಧ್ಯಕ್ಷ ಯೋಗೀಶ್ ಭಟ್, ಸದಸ್ಯ ರಾಮಕೃಷ್ಣ ಆಚಾರ್ಯ, ಪ್ರಾಂಶುಪಾಲ ಅಮರೇಶ್ ಹೆಗ್ಡೆ ಉಪಸ್ಥಿತರಿದ್ದರು. ಸಾರ್ವಜನಿಕ ಸಂಪರ್ಕಾಧಿಕಾರಿ ವಿಜಯ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.