???????????????????????????????????? 
ಜಿಲ್ಲೆ

ಮೌಂಟ್ ಕಾರ್ಮೆಲ್ ಸೆಂಟ್ರಲ್ ಶಾಲೆಯಲ್ಲಿ ಸ್ವಾತಂತ್ರೊೃೀತ್ಸವ

ಹರೀಶ ಎಂ.

ಮಂಗಳೂರು: ನಗರದ ಮೇರಿಹಿಲ್‌ನ ಮೌಂಟ್ ಕಾರ್ಮೆಲ್ ಸೆಂಟ್ರಲ್ ಶಾಲೆಯಲ್ಲಿ 77ನೇ ಸ್ವಾತಂತ್ರೊೃೀತ್ಸವ ಆಚರಿಸಲಾಯಿತು.

ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ಕ್ಯಾರೊಲಿನ್ ಪಾಯ್ಸ ಧ್ವಜಾರೋಹಣಗೈದರು. ಶಾಲಾ ಜಂಟಿ ಕಾರ್ಯದರ್ಶಿ ಭಗಿನಿ ಆಶಾ ಪ್ರೀಮಾ, ಆಡಳಿತಾಧಿಕಾರಿ ಭಗಿನಿ ಕರಿಸ್ಸಿಮ ಮತ್ತು ಪ್ರಾಂಶುಪಾಲೆ ಭಗಿನಿ ಮೆಲಿಸ್ಸಾ ಉಪಸ್ಥಿತರಿದ್ದರು. ಶಾಲಾ ಎನ್.ಸಿ.ಸಿ, ಸ್ಕೌಟ್ಸ್, ಗೈಡ್ಸ್ ಹಾಗೂ ಶಾಲಾ ವಿದ್ಯಾರ್ಥಿಗಳು ಶಿಸ್ತುಬದ್ದ ಪಥ ಸಂಚಲನದಲ್ಲಿ ಭಾಗವಹಿಸಿದರು.


ಶಾಲೆಯ 9ನೇ ಸಿ ಮತ್ತು ಡಿ ವಿಭಾಗಗಳ ಮತ್ತು 11ನೇ ತರಗತಿಯ ವಿದ್ಯಾರ್ಥಿಗಳಿಂದ ದೇಶ ಭಕ್ತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು. ಸ್ವಾತಂತ್ರೊೃೀತ್ಸವ ಸಂದರ್ಭದಲ್ಲಿ ಏರ್ಪಡಿಸಿದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮತ್ತು ಪಥ ಸಂಚಲನದಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ವಿತರಿಸಿದರು.