ರಾಯಬಾಗ: ಗುರುವಿನಲ್ಲಿ ಕರುಣೆ ಇದ್ದರೆ ಮಾತ್ರ ಅಂತಹ ಗುರು ಸಮಾಜಕ್ಕೆ ಒಳ್ಳೆಯ ಮಾರ್ಗದರ್ಶಕನಾಗಲು ಸಾಧ್ಯ ಎಂದು ಬಾವನ ಸೌಂದತ್ತಿಯ ಓಂಕಾರ ಆಶ್ರಮದ ಶಿವಶಂಕರ ಸ್ವಾಮೀಜಿ ಹೇಳಿದರು.
ತಾಲೂಕಿನ ಬಾವನ ಸೌಂದತ್ತಿ ಗ್ರಾಮದ ಓಂಕಾರ ಆಶ್ರಮದಲ್ಲಿ ಗುರು ಪೂರ್ಣಿಮೆ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಭಕ್ತರಿಗೆ ಸರಿಯಾದ ಮಾರ್ಗ ತೋರಿಸುವವನೇ ನಿಜವಾದ ಗುರು ಆಗುತ್ತಾನೆ. ಜೀವನದಲ್ಲಿ ಸನ್ಮಾರ್ಗ ತೋರಿಸುವ ಗುರುಗಳನ್ನು ಪ್ರತಿಯೊಬ್ಬರೂ ನೆನೆಯಬೇಕು ಎಂದರು.
ಶಿವ ಭಜನೆ ಮಂಡಳ ವತಿಯಿಂದ ಭಜನೆ ಕಾರ್ಯಕ್ರಮ ಜರುಗಿತು. ಅಪ್ಪಾಸಾಹೇಬ ಭಿಷ್ಠೆ ಹಾಗೂ ಗಂಗಾಧರ ಕುಂಬಾರ ದಂಪತಿ ಶ್ರೀಗಳ ಪಾದಪೂಜೆ ನೆರವೇರಿಸಿದರು. ಮಾತೋಶ್ರೀ ಬ್ರಹ್ಮರಾಂಬಿಕಾ, ಮಾತೋಶ್ರೀ ನಾಗಲಾಂಬಿಕ, ಗ್ರಾಪಂ ಅಧ್ಯಕ್ಷ ರಾಮಚಂದ್ರ ಕಾಟೆ, ಅನಿಲ ಹಂಜೆ, ಅಜಿತ ಖೇಮಲಾಪುರೆ, ಶಾಂತಿನಾಥ ಪಾಟೀಲ, ಸತ್ಯಪ್ಪ ಭೀಷ್ಠೆ, ಬಿ.ಎಂ.ಪೂಜಾರ, ಪ್ರಕಾಶ ಭಿಷ್ಠೆ, ಮಾರುತಿ ಚೌಗಲೆ, ಜಿನ್ನಪ್ಪ ಚಂಪು, ಚಿದಾನಂದ ಮಂಗಸುಳೆ, ಅಜಿತ ಕುಂಬಾರ, ಉಲ್ಲಾಸ ಮಿರ್ಜೆ, ಶ್ರೀಕಾಂತ ಮಂಗಸುಳೆ, ಕುಮಾರ ಕುಂಬಾರ, ಮಹಾಲಿಂಗ ಶಾಸ್ತ್ರಿ, ದಯಾನಂದ ಹಿರೇಮಠ ಇತರರು ಇದ್ದರು.