ಎಂ.ಅಜೀಶ್  
ಜಿಲ್ಲೆ

ಹೊಳೆಗೆ ಹಾರಿದ್ದ ವ್ಯಾಪಾರಿ ಶವವಾಗಿ ಪತ್ತೆ : ಆತ್ಮಹತ್ಯೆಗೆ ಮೊದಲು ಸ್ನೇಹಿತರಿಗೆ ವಾಟ್ಸಾಪ್ ಸಂದೇಶ

ಇಂದಿರಾ ಎನ್ ಕೆ

ಕಾಸರಗೋಡು: ಚಂದ್ರಗಿರಿ ಸೇತುವೆಯಿಂದ ಹೊಳೆಗೆ ಹಾರಿ ನೀರುಪಾಲಾಗಿದ್ದ, ಸಿಮೆಂಟ್ ವ್ಯಾಪಾರಿ ರಾವಣೇಶ್ವರ ಮುಕ್ಕುಟ್ ಪಾಲಕ್ಕಲ್ ನಿವಾಸಿ ಅಚ್ಯುತನ್-ರಾಧಾ ದಂಪತಿ ಪುತ್ರ ಎಂ.ಅಜೀಶ್(32) ಅವರು ಶವವಾಗಿ ಶುಕ್ರವಾರ ಕಾಸರಗೋಡು ಚೆಂಬರಿಕ ಕಡಪ್ಪುರದಲ್ಲಿ ಪತ್ತೆಯಾಗಿದ್ದಾರೆ.
ಮುಕ್ಕುಟ್ ಹಾಗೂ ಕಳರಿಕ್ಕಾಲ್ ಎಂಬಲ್ಲಿ ಎರಡು ಸಿಮೆಂಟ್ ಅಂಗಡಿ ಹೊಂದಿರುವ ಅಜೀಶ್ ಡಿವೈಎಫ್‌ಐ ರಾವಣೇಶ್ವರ ವಲಯ ಸಮಿತಿ ಸದಸ್ಯರಾಗಿದ್ದರು. ಆತ್ಮಹತ್ಯೆಗೂ ಮೊದಲು, ತನ್ನ ಸ್ನೇಹಿತರಿಗೆ ವಾಟ್ಸಾಪ್ ಸಂದೇಶ ರವಾನಿಸಿದ್ದರೆನ್ನಲಾಗಿದೆ. ಗುರುವಾರ ಸಂಜೆ ಬೈಕಲ್ಲಿ ಕಾಸರಗೋಡು ಭಾಗಕ್ಕೆ ಅಗಮಿಸಿದ್ದ ಅವರು, ಚಂದ್ರಗಿರಿ ಸೇತುವೆಯಿಂದ ಹೊಳೆಗೆ ಧುಮುಕಿದ್ದು, ಸ್ಥಳದಲ್ಲಿದ್ದವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಹೊಳೆ ತುಂಬಿ ಹರಿಯುತ್ತಿದ್ದ ಹಿನ್ನೆಲೆಯಲ್ಲಿ ಹುಡುಕಾಟಕ್ಕೂ ಅಡಚಣೆಯುಂಟಾಗಿತ್ತು. ಈ ಮಧ್ಯೆ ಶುಕ್ರವಾರ ಬೆಳಗ್ಗೆ ಚೆಂಬರಿಕ ಕಡಪ್ಪುರದಲ್ಲಿ ಮೃತದೇಹ ಪತ್ತೆಯಾಗಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಆರ್ಥಿಕ ಅಡಚಣೆ ಆತ್ಮಹತ್ಯೆಗೆ ಕಾರಣವೆಂದು ಸಂಶಯಿಸಲಾಗಿದೆ.