ಹರಪನಹಳ್ಳಿ ಉಪಕಾರಾಗೃಹದಲ್ಲಿ ಸರ್ಕಾರಿ ನಿವೃತ್ತ ನೌಕರರ ಸಂಘದಿಂದ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಸಲಾಂ ಸಾಹೇಬ್ ಹಾಡಿದರು. ಪ್ರಮುಖರಾದ ಪರಸಪ್ಪನವರ ಹಾಲಪ್ಪ, ಫಕ್ಕೀರಪ್ಪ, ಕೆ ಕೊಟ್ರಪ್ಪ, ಗಾಯತ್ರಮ್ಮ, ಹುಣ್ಸಿಹಳ್ಳಿ ಹನುಮಂತಪ್ಪ, ಎಸ್ ಜೆ ಮುರುಗೇಶ ವಾರ್ಡರ್, ನರಸಿಂಗ ಕಲಾಲ್ ಇತರರಿದ್ದರು. 
ಜಿಲ್ಲೆ

ಮಾನಸಿಕವಾಗಿ ಕುಗ್ಗದೆ ಮುನ್ನೆಡೆಯಿರಿ

ಹರಪನಹಳ್ಳಿ: ಸಂಗೀತ ಕೇಳುವುದರಿಂದ ಮನಸ್ಸು ಉಲ್ಲಾಸ ಭರಿತವಾಗುತ್ತದೆ ಎಂದು ನಿವೃತ್ತ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶೇಖರಗೌಡ ಪಾಟೀಲ್ ತಿಳಿಸಿದರು.

ಪಟ್ಟಣದ ಕಂಚಿಕೆರೆ ರಸ್ತೆಯ ಉಪಕಾರಾಗೃಹದಲ್ಲಿ ಸೋಮವಾರ ನಿವೃತ್ತ ಸರ್ಕಾರಿ ನೌಕರರ ಸಂಘದ ವತಿಯಿಂದ ವಚನ ಗಾಯನ ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜೀವನವೆಂಬ ಸಾಗರದಲ್ಲಿ ನಡೆಯುವವನು ಎಡವಲೆ ಬೇಕು. ಜೀವನದಲ್ಲಿ ಆಗಿರುವ ಘಟನೆಗಳನ್ನು ನೆನೆದು ಮಾನಸಿಕವಾಗಿ ಕುಗ್ಗದೆ, ನ್ಯೂನತೆಗಳನ್ನು ಸರಿಪಡಿಸಿಕೊಂಡು ಮಾನಸಿಕವಾಗಿ ಸದೃಢರಾಗಬೇಕು ಎಂದರು.

ಉಪಕಾರಾಗೃಹ ಅಧೀಕ್ಷಕ ಕೆ ಜಿ ಭಂಡಾರಿ ಮಾತನಾಡಿ, ಖೈದಿಗಳು ತಮ್ಮ ಜೀವನದಲ್ಲಿ ತಿಳಿದೊ ತಿಳಿಯದೆನೊ ನಡೆದಿರುವ ಘಟನೆಗಳನ್ನು ಮತ್ತೆ ಮರುಕಳಿಸದಂತೆ ಭವಿಷ್ಯದ ಜೀವನದಲ್ಲಿ ಉತ್ತಮ ಸಂಸ್ಕಾರಯುತ ಮತ್ತು ಮಾನವೀಯತೆಯ ಗುಣಗಳನ್ನು ಬೆಳೆಸಿಕೊಂಡು ಮುಂದೆ ಸಾಗಬೇಕು. ಮನಪರಿವರ್ತನೆ ಮಾಡುವ ಉದ್ದೇಶದಿಂದ ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಂಗೀತವು ಬದುಕನ್ನು ಬದಲಿಸುವ ಶಕ್ತಿಯನ್ನು ಹೊಂದಿದೆ ಎಂದರು. ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟ ನಿವೃತ್ತ ಶಿಕ್ಷಕರಾದ ಸಲಾಂ ಸಾಹೇಬ್, ಶಂಕ್ರಪ್ಪ, ಕೆ ಈಶ್ವರಪ್ಪ ಅವರಿಗೆ ಸನ್ಮಾನಿಸಲಾಯಿತು.