ಜಿಲ್ಲೆ

ಕ್ರಿಕೆಟ್ ಆಟದಿಂದ ಮಾನಸಿಕ ಉಲ್ಲಾಸ

ವಿನಯ ಹೆಗಡೆ

ಸಿದ್ದಾಪುರ: ಕ್ರಿಕೆಟ್ ಆಟ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯ, ಶಾಂತಿ ನೆಮ್ಮದಿಯ ಜತೆಗೆ ಜೀವನ ಶೈಲಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಸಿದ್ದಾಪುರ ಸ್ಪೋರ್ಟ್ಸ್ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ನಂದನ ಬೋರ್ಕರ ಹೇಳಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಸಿದ್ದಾಪುರ ಸ್ಪೋರ್ಟ್ಸ್ ಕ್ಲಬ್ ಹಾಗೂ ಡಾಲ್ಪಿನ್ ಕ್ರಿಕೆಟ್ ಕ್ಲಬ್ ಆಯೋಜಿಸಿದ್ದ ಬೇಸಿಗೆ ಕ್ರಿಕೆಟ್ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಿದ್ದಾಪುರ ಸ್ಪೋರ್ಟ್ಸ್  ಕ್ಲಬ್ ಅಧ್ಯಕ್ಷ ವಿನಾಯಕ ಶಂಕರ ಶೇಟ್ ಅಧ್ಯಕ್ಷತೆವಹಿಸಿದ್ದರು. ಸಿದ್ದಾಪುರ ಡಾಲ್ಪಿನ್ ಕ್ರಿಕೆಟ್ ಕ್ಲಬ್​ಅಧ್ಯಕ್ಷ ಹಾಗೂ ತರಬೇತುದಾರ ಡೊಮಿನಿಕ್ ಫರ್ನಾಂಡಿಸ್ ಮಾತನಾಡಿದರು.

ಇದೇ ಸಂದರ್ಭದಲ್ಲಿ ಶಿಬಿರದಲ್ಲಿ ಪಾಲ್ಗೊಂಡ 21ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು.

ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಶಿಯೇಶನ್ ಆಯೋಜಿಸಿದ್ದ 19ವರ್ಷದೊಳಗಿನ ಜಿಲ್ಲಾ ಜೋನಲ್ ಆಯ್ಕೆ ಪ್ರಕ್ರಿಯೆಯಲ್ಲಿ ಸಿದ್ದಾಪುರದ ಡಾಲ್ಪಿನ್ ಕ್ರಿಕೆಟ್ ಕ್ಲಬ್​ನಲ್ಲಿ ತರನೇತಿ ಪಡೆದ ಧನುಷ್ ರಘುವೀರ ನಾಯ್ಕ ಆಯ್ಕೆ ಆಗಿದ್ದು ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಡಾಲ್ಪಿನ್ ಕ್ರಿಕೆಟ್ ಕ್ಲಬ್​ನ ಸಂಯೋಜಕ ಹರ್ಷ ಹೆಗಡೆ, ಸಿದ್ದಾಪುರ ಸ್ಪೋಟರ್Õ ಕ್ಲಬ್ ನಿರ್ದೇಶಕ ಪ್ರಶಾಂತ ಡಿ.ಶೇಟ್, ರವಿ ಅಂಬಳ್ಳಿ, ಗಣಪತಿ ನಾಯ್ಕ, ಅನುಪ್ ಹುಲೇಕಲ್, ರಾಘವೇಂದ್ರ ರೇವಣಕರ್, ವಾದಿರಾಜ್ ಡಿ.ಶೇಟ್ ಇತರರಿದ್ದರು. ರಘುವೀರ ನಾಯ್ಕ ಹಾಗೂ ಚಂದನ ಕೆರ್ಕರ್ ಕಾರ್ಯಕ್ರಮ ಉಹಯುನಿರ್ವಹಿಸಿದರು.