ಸಾಗರ: ಮನುಷ್ಯನಿಗೆ ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ. ಈ ಬಗ್ಗೆ ಪ್ರತಿಯೊಬ್ಬರೂ ಗಂಭೀರವಾಗಿ ಗಮನಿಸಬೇಕು ಎಂದು ಖ್ಯಾತ ಮಾನಸಿಕ ರೋಗ ತe್ಞೆ ಡಾ. ನಿರುಪಮಾ ನಾಗರಾಜ್ ಹೇಳಿದರು.
ನಗರದ ರೋಟರಿ ಭವನದಲ್ಲಿ ರೋಟರಿ ಸಂಸ್ಥೆ ಮತ್ತು ಇನ್ನರ್‌ವ್ಹೀಲï ಕ್ಲಬï ಶನಿವಾರ ಏರ್ಪಡಿಸಿದ್ದ ಜೀವಿತಾವಽಯಲ್ಲಿ ಬರುವ ಮಾನಸಿಕ ಆರೋಗ್ಯ ಸಮಸ್ಯೆಗಳ ಕುರಿತ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಮಾನಸಿಕ ಕಾಯಿಲೆ ಮಿದುಳಿಗೆ ಸಂಬAಽಸಿದ ಸಮಸ್ಯೆ. ಮನುಷ್ಯ ವಿವಿಧ ರೀತಿಯಲ್ಲಿ ಮಾನಸಿಕ ಕಾಯಿಲೆಗೆ ಒಳಗಾಗುತ್ತಾನೆ. ಸಮರ್ಪಕ ಚಿಕಿತ್ಸೆಯಿಂದ ಇದನ್ನು ನಿರ್ವಹಣೆ ಮಾಡಬಹುದು ಎಂದರು.
ಬಾಲ್ಯದಿಂದ ವೃದ್ಧಾಪ್ಯದವರೆಗೂ ಈ ಮಾನಸಿಕ ಕಾಯಿಲೆ ವ್ಯಾಪಿಸಿದೆ. ಒತ್ತಡ, ಅನುಭವ, ಕೀಳರಿಮೆ, ಅಧೈರ್ಯ, ದೈಹಿಕ ಸಮಸ್ಯೆ, ಲೈಂಗಿಕ ಶೋಷಣೆ ಮುಂತಾದವು ಮಾನಸಿಕ ಕಾಯಿಲೆಗೆ ಕಾರಣಗಳು. ಪ್ರತಿ ಹಂತದಲ್ಲೂ ಇದನ್ನು ಗುರುತಿಸುವುದು ಕಷ್ಟ. ಬಾಲ್ಯದಲ್ಲಿ ಮಕ್ಕಳಿಗೆ ಸರಿಯಾಗಿ ಮಾತನಾಡಲು ಬರುವುದಿಲ್ಲ. ಚಟುವಟಿಕೆಯಿಂದ ಇರದೆ ತಟಸ್ಥರಾಗಿರುವುದು, ಇತರ ಮಕ್ಕಳೊಂದಿಗೆ ಬೆರೆಯದಿರುವುದು, ತನ್ನಷ್ಟಕ್ಕೇ ಕಿರುಚಿಕೊಳ್ಳುವುದು ಮುಂತಾದ ತೊಂದರೆಗಳನ್ನು ಮಕ್ಕಳು ಅನುಭವಿಸುತ್ತಿದ್ದು ಮಾನಸಿಕ ತಜ್ಞರಿಂದ ಸರಿಯಾದ ಕೌನ್ಸೆಲಿಂಗ್ ನಡೆಸಿ ಚಿಕಿತ್ಸೆ ನೀಡಿ ಕಡಿಮೆ ಮಾಡಬಹುದು ಎಂದರು.
ಯೌವನಾವಸ್ಥೆಯಲ್ಲಿ ನಾನಾ ರೀತಿಯಲ್ಲಿ ದೈಹಿಕ ಬದಲಾವಣೆಗಳಾಗುತ್ತವೆ. ಇದನ್ನು ಸೂಕ್ಷ÷್ಮ ವಯಸ್ಸು ಎನ್ನುತ್ತಾರೆ. ಸರಿಯಾದ ಮಾರ್ಗದರ್ಶನ ಸಿಕ್ಕರೆ ಉತ್ತಮ ನಾಗರಿಕರಾಗುತ್ತಾರೆ. ಇಲ್ಲವಾದರೆ ಅಡ್ಡದಾರಿ ಹಿಡಿಯುತ್ತಾರೆ. ಹೆಚ್ಚು ಅಂಕ ತೆಗೆಯಬೇಕು ಎಂಬ ಒತ್ತಡ ಇರುತ್ತದೆ. ಕೇವಲ ಪಠ್ಯಕ್ಕೆ ಅಂಟಿಕೊAಡಿರದೆ ಇತರ ಚಟುವಟಿಕೆಯಲ್ಲೂ ತೊಡಗಿಸಬೇಕು. ಪ್ರೀತಿ, ಪ್ರೇಮದ ಕುರಿತು ಪಾಲಕರು ತಿಳಿಸಿ ಹೇಳಬೇಕು. ಡ್ರU್ಸï, ಮಾದಕ ವಸ್ತುಗಳಿಗೆ ಮಾರುಹೋಗಬಹುದು. ದುಶ್ಚಟಗಳಿಗೆ ಸಿಲುಕಬಹುದು. ಈ ಹಂತದಲ್ಲಿ ಮನಸ್ಸಿಗೆ ಆಘಾತವಾಗುವ ಸಂಭವವಿರುತ್ತದೆ. ಪಾಲಕರು ನಕಾರಾತ್ಮಕ ಮಾತುಗಳಿಂದ ಮಕ್ಕಳ ವಿಶ್ವಾಸ ಕುಗ್ಗುತ್ತದೆ. ಇಂತಹ ಸಂದರ್ಭದಲ್ಲಿ ಪಾಲಕರು ಎಚ್ಚರ ವಹಿಸಿ ವೈದ್ಯರ ಸಲಹೆ ಪಡೆದುಕೊಳ್ಳಬೇಕು ಎಂದರು.
ರೋಟರಿ ಅಧ್ಯಕ್ಷೆ ಡಾ. ರಾಜನಂದಿನಿ ಕಾಗೋಡು ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರದ ಮಟ್ಟದಲ್ಲಿ ಶಿಕ್ಷಣ ಇಲಾಖೆಯಿಂದ ಮಾನಸಿಕ ತಪಾಸಣೆಗೆ ಪ್ರತ್ಯೇಕ ವಿಭಾಗ ಮಾಡಿ, ಮಾನಸಿಕ ತಜ್ಞರೊಬ್ಬರನ್ನು ನೇಮಿಸಬೇಕು. ಎಲ್ಲ ಶಾಲೆಗೆ ಹೋಗಿ ಮಾನಸಿಕ ಸಮಸ್ಯೆಯಿಂದ ಬಳಲುವ ಮಕ್ಕಳಿಗೆ ಕೌನ್ಸೆಲಿಂಗ್ ನಡೆಸಿ ಸೂಕ್ತ ಚಿಕಿತ್ಸೆ ಕೊಡಿಸಬಹುದು. ಶಾಲೆಯಲ್ಲಿ ಮುಖ್ಯ ಶಿಕ್ಷಕರ ಜವಾಬ್ದಾರಿ ಹೆಚ್ಚಿದೆ. ಮಾನಸಿಕ ಸಮಸ್ಯೆ ನಿವಾರಣೆ ಕುರಿತು ರೋಟರಿ ಸಂಸೆಯಿAದ ನಿರಂತರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ವಿ.ಸಿ. ಶಿವಪ್ಪ ರೋಟರಿ ಸದಸ್ಯರಾಗಿ ಸೇರ್ಪಡೆಗೊಂಡರು. ಕಾರ್ಯದರ್ಶಿ ಬಿ.ಎನ್.ರಾಜೀವ್, ಇನ್ನರ್‌ವ್ಹೀಲï ಕ್ಲಬï ಅಧ್ಯಕ್ಷೆ ಉಷಾ ರಮಣ, ಡಾ. ಎಚ್.ಎಂ.ಶಿವಕುಮಾರ್, ಡಾ. ಅರುಣ್‌ಕುಮಾರ್, ಗುರುಪ್ರಸಾದ್ ಇತರರಿದ್ದರು.
ಇತ್ತೀಚೆಗೆ ಬೆಟ್ಟಿಂಗ್, ವಿಡಿಯೋ ಗೇಮ್ಸï, ಸೆಲಿ ತೆಗೆದುಕೊಳ್ಳುವುದು ಇಂತಹ ಹೊಸ ಸಮಸ್ಯೆಗಳು ಕಾಣಿಸಿಕೊಂಡಿವೆ. ೬೫ ವರ್ಷ ಆದ ನಂತರ ಮುಂದೆ ನನಗೆ ಆಸರೆ ಯಾರು? ಕಾಯಿಲೆ ಬಗ್ಗೆ ಭಯ, ನಿದ್ರೆ ಬಾರದಿರುವುದು ಮುಂತಾದ ವಿಷಯಗಳಿಂದ ಆತಂಕ, ಬೇಸರ ಉಂಟಾಗುತ್ತದೆ. ಸೈಕೋಸಿಸ್ ಚಿಕಿತ್ಸೆ ಕೊಟ್ಟರೆ ಕಡಿಮೆಯಾಗುತ್ತದೆ. ಯಾವುದೇ ಮಾನಸಿಕ ಸಮಸ್ಯೆ ಇದ್ದಲ್ಲಿ ಅವರಿಗೆ ಛೀಮಾರಿ ಹಾಕಬಾರದು.|ಡಾ.ನಿರುಪಮಾ ನಾಗರಾಜ್ಖ್ಯಾತ ಮಾನಸಿಕ ರೋಗ ತಜ್ಞೆ