ಕನಕಗಿರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕ್ರೀಡಾಕೂಟದಲ್ಲಿ ಹಿರಿಯ ದೈಹಿಕ ಶಿಕ್ಷಕ ಶ್ಯಾಮೀದ್‌ಸಾಬ್ ಲೈನ್ದಾರ್‌ಗೆ ಸನ್ಮಾನಿಸಲಾಯಿತು. ಸಹಾಯಕ ಪ್ರಾಧ್ಯಾಪಕರಾದ ಶೋಭಾ ಕಣ್ಣಿ, ಮರ್ವಿನ್ ಡಿಸೋಜ, ವೀರೇಶ ಕೆಂಗಲ್, ಲಲಿತಾ, ಎಚ್.ಸಿ.ಆಶಿಕಾ ಇತರರಿದ್ದರು. 
ಜಿಲ್ಲೆ

ಮಾನಸಿಕ, ದೈಹಿಕ ಸದೃಢತೆಗೆ ಕ್ರೀಡೆ ಅವಶ್ಯ

ಕನಕಗಿರಿ: ಮಾನಸಿಕ ಹಾಗೂ ದೈಹಿಕ ಸದೃಢತೆಗೆ ಕ್ರೀಡೆ, ಯೋಗ ಅವಶ್ಯವಾಗಿವೆ ಎಂದು ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಸರ್ಫರಾಜ್ ಆಹ್ಮದ್ ಹೇಳಿದರು.

ಗುರುವಾರದಂದು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಕೆವಲ ಪಠ್ಯಕ್ಕೆ ಮಾತ್ರ ಸೀಮಿತರಾಗದೆ, ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು.

ಕ್ರೀಡೆ, ಯೋಗ, ವ್ಯಾಯಾಮಗಳಿಂದ ಮನುಷ್ಯನ ಆರೋಗ್ಯ ವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ದಿನದ ಕೆಲ ಸಮಯವನ್ನು ಇವುಗಳಿಗೆ ಮೀಸಲಿಡಬೇಕು ಎಂದರು.

ದೈಹಿಕ ಶಿಕ್ಷಕ ಶಾಮೀದಸಾಬ ಲೈನದಾರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಕರು ದುಶ್ಚಟಗಳಿಗೆ ದಾಸರಾಗುತ್ತಿದ್ದು, ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ.

ದುಶ್ಚಟಗಳಿಗೆ ಮೀಸಲಿಡುವ ಸಮಯವನ್ನು ಕ್ರೀಡೆಗಳಿಗೆ ಮೀಸಲಿರಿಸಿದರೆ, ಜೀವನ ಬಂಗಾರವಾಗಲಿದೆ ಎಂದರು. ವಿದ್ಯಾರ್ಥಿಗಳಿಗೆ ನಾನಾ ಕ್ರೀಡೆಗಳು ನಡೆದವು.

ಸಹಾಯಕ ಪ್ರಾಧ್ಯಾಪಕರಾದ ಶೋಭಾ ಕಣ್ಣಿ, ಮರ್ವಿನ್ ಡಿಸೋಜ, ವೀರೇಶ ಕೆಂಗಲ್, ಲಲಿತಾ, ಎಚ್.ಸಿ ಆಶಿಕಾ, ಅನಿತಾ, ಶಾಂತಾ, ಉಪನ್ಯಾಸಕರಾದ ಬಾಳಪ್ಪ ಸೂಳೇಕಲ್, ಗೋಪಾಲರೆಡ್ಡಿ ಮಾದಿನಾಳ, ಮಾರುತೇಶ, ಮಾದಿನಾಳಪ್ಪ, ಮಂಜುಳಾ ಇದ್ದರು.