ಮುದಗಲ್ ಸಮೀಪದ ತಲೇಖಾನ್‌ನಲ್ಲಿ ಕ್ರಿಕೆಟ್ ಪಂದ್ಯಾವಳಿಯನ್ನು ಗ್ರಾಪಂ ಸದಸ್ಯ ವೀರನಗೌಡ ಪೊಲೀಸ್ ಪಾಟೀಲ್ ಉದ್ಘಾಟಿಸಿದರು. ರೈತ ಮುಖಂಡ ಹನುಮಂತಪ್ಪ ಬಾಲದಂಡಿ, ಗ್ಯಾರಂಟಿ ಸಮಿತಿ ಸದಸ್ಯ ಕನಕಪ್ಪ ಗುಡಿಹಾಳ, ದೊಡ್ಡನಗೌಡ, ಪ್ರದೀಪ್ ಸಿಂಧನೂರು ಇತರರಿದ್ದರು. 
ಜಿಲ್ಲೆ

ಮಾನಸಿಕ ಆರೋಗ್ಯ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ

ಮುದಗಲ್: ಸಮೀಪದ ತಲೇಖಾನ ಗ್ರಾಮದಲ್ಲಿ ಸಮಸ್ತ ಗೆಳೆಯರ ಬಳಗ ಮತ್ತು ವಿವಿಧ ಸಂಘಟನೆಗಳಿಂದ ಆಯೋಜಿಸಿದ್ದ ತಲೇಖಾನ ಪ್ರೀಮಿಯರ್ ಲಿಂಗ್ ಕ್ರಿಕೆಟ್ ಪಂದ್ಯವನ್ನು ಗ್ರಾಪಂ ಸದಸ್ಯ ವೀರನಗೌಡ ಪೊಲೀಸ್ ಪಾಟೀಲ್ ಶನಿವಾರ ಉದ್ಘಾಟಿಸಿದರು. ಮಸ್ಕಿ ತಾಪಂ ಸದಸ್ಯ ದೇವಪ್ಪ ರಾಠೋಡ್ ಮಾತನಾಡಿ, ಕ್ರೀಡಾಕೂಟಗಳಿಂದ ಮಾನಸಿಕ ಆರೋಗ್ಯ ದೈಹಿಕ ಸಧೃಡತೆಗೆ ದೊರೆಯುತ್ತದೆ. ಕೇವಲ ಓದಿನಿಂದ ಹೆಸರು ಗಳಿಸುವುದಲ್ಲದೇ ಕ್ರೀಡೆಗಳಿಂದಲೂ ಯುವಕರು ಹೆಸರು ಮಾಡಬಹುದು ಎಂದರು. 7ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು. ಕಾರ್ಯಕ್ರಮದಲ್ಲಿ ವೀರೇಶ ನಾಗರಬೆಂಚಿ, ಎಸ್‌ಡಿಎಂಸಿ ಅಧ್ಯಕ್ಷ ವೀರೇಶ, ಶೇಷಪ್ಪ ಗುಡಿಹಾಳ ಇತರರಿದ್ದರು.