ಹುಕ್ಕೇರಿ: ದೈಹಿಕ ಮತ್ತು ಮಾನಸಿಕ ಕ್ಷಮತೆಗೆ ಕ್ರೀಡೆ ಅವಶ್ಯ. ವಿದ್ಯಾರ್ಥಿಗಳು ವಿದ್ಯಾಭ್ಯಾಸದೊಂದಿಗೆ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕೆಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಚಿಕ್ಕೋಡಿ ಜಿಲ್ಲಾ ಉಪನಿರ್ದೇಶಕ ಪಿ.ಐ.ಭಂಡಾರಿ ಹೇಳಿದರು.
ಪಟ್ಟಣದ ಸಿ.ಎಸ್.ತುಬಚಿ ಶಿಕ್ಷಣ ಸಂಸ್ಥೆ ಮೈದಾನದಲ್ಲಿ ತಾಲೂಕು ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆ ಮತ್ತು ಎಸ್‌ಕೆ ಪದವಿಪೂರ್ವ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಅನಿಲ ಶೆಟ್ಟಿ ಮಾತನಾಡಿದರು.
ಸ್ಪರ್ಧಾಳುಗಳಿಗೆ ಬಿ.ಎಲ್.ನಾಯಿಕ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯದರ್ಶಿ ಪಿಂಟು ಶೆಟ್ಟಿ, ನಿರ್ದೇಶಕರಾದ ಓಂಕಾರ ಹೆದ್ದೂರಶೆಟ್ಟಿ, ಮಂಗಲಾ ಹಂದಿಗುಂದ, ಸಿ.ಐ.ಗಂಧ, ಎಸ್.ಬಿ.ಬುರ್ಜಿ, ಕ್ರೀಡಾ ಸಂಯೋಜಕರಾದ ಅಜೇಯ ಮೋನೆ, ಎಂ.ಐ.ಮಠಪತಿ, ಎಸ್.ಡಿ.ಬಶೆಟ್ಟಿ. ಪಿ.ಎಸ್.ನೇರ್ಲೆಕರ, ಎಸ್.ಎನ್.ನಾಯಿಕ ಇತರರಿದ್ದರು.