ಜಿಲ್ಲೆ

ಮೆಣಸಗೆರೆ ಡಿ.ಎಂ.ಯುಕ್ತಾ ಆಯ್ಕೆ

ಲೋಕೇಶ್ ಮನು. ಡಿ

ಕೆ.ಎಂ.ದೊಡ್ಡಿ: ಏಷ್ಯನ್ ಡಾಡ್ಜ್ ಬಾಲ್ ಚಾಂಪಿಯನ್‌ಶಿಪ್-2023ಗೆ ಟೀಂ ಇಂಡಿಯಾಗೆ ಮೆಣಸಗೆರೆಯ ಡಿ.ಎಂ.ಯುಕ್ತಾ ಆಯ್ಕೆಯಾಗಿದ್ದಾರೆ.


ನ.17ರಿಂದ 20ರವರೆಗೆ ಸಿಂಗಾಪುರದ ಟಿಂಪನೀಸ್ ಹಬ್ ಒಳಾಂಗಣ ಕ್ರೀಡಾಂಗಣದಲ್ಲಿ ವರ್ಲ್ಡ್ ಡಾಡ್ಜ್ ಬಾಲ್ ಫೆಡರೇಷನ್ ಮತ್ತು ಏಷ್ಯನ್ ಬಾಡ್ ಬಾಲ್ ಫೆಡರೇಷನ್ ಸಹಯೋಗದೊಂದಿಗೆ ನಡೆಯುತ್ತಿರುವ ಏಷ್ಯನ್ ಡಾಡ್ಜ್ ಬಾಲ್ ಚಾಂಪಿಯನ್‌ಶಿಪ್‌ಗೆ ಭಾರತ ತಂಡದ ವನಿತೆಯರ ತಂಡಕ್ಕೆ ಡಿ.ಎಂ.ಯುಕ್ತಾ ಅವರು ಆಯ್ಕೆಯಾಗಿದ್ದಾರೆ. ಈಕೆ ಮದ್ದೂರು ತಾಲೂಕು ಮೆಣಸಗೆರೆ ಗ್ರಾಮದ ಬಿ.ಶ್ರುತಿ ಮತ್ತು ಎಂ.ಟಿ.ದಿವ್ಯಾನಂದ ಅವರ ಪುತ್ರಿ.

ಡಿ.ಎಂ.ಯುಕ್ತಾ ಪ್ರಸ್ತುತ ಮೆಣಸಗೆರೆಯ ಜ್ಞಾನಮುದ್ರಾ ವಿದ್ಯಾಮಂದಿರ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ. ನ.10 ರಿಂದ 15ರವರೆಗೆ ಬೆಂಗಳೂರಿನ ಟ್ರಾನ್ಸ್ಎಂಡ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್‌ನಲ್ಲಿ ಏಷ್ಯನ್ ಡಾಡ್ಜ್ ಬಾಲ್ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿರುವ ಎಲ್ಲ ಕ್ರೀಡಾಪಟುಗಳಿಗೆ ಟಿ.ಬಿ.ರಾಜೇಶ್ ಮತ್ತು ವಿಜೇತ್‌ಕುಮಾರ್ ಜೈನ್ ಅವರ ಮಾರ್ಗದರ್ಶನದಲ್ಲಿ ಒಂದು ವಾರಗಳ ಕಾಲ ತರಬೇತಿ ಇರಲಿದೆ. ನ.16ರಂದು ಸಿಂಗಾಪುರಕ್ಕೆ ಆಟಗಾರರು ತೆರಳಿದ್ದಾರೆ ಎಂದು ಜ್ಞಾನಮುದ್ರಾ ವಿದ್ಯಾ ಮಂದಿರ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ತರಬೇತಿದಾರ ಡಿ.ಮನು ಮಾಹಿತಿ ನೀಡಿದ್ದಾರೆ.