ರಾಯಲ್ಪಾಡು: ರಾಯಲ್ಪಾಡು ಠಾಣಾ ವ್ಯಾಪ್ತಿಯ ಲಕ್ಷ್ಮೀಪುರ ಕ್ರಾಸ್ ಬಳಿಯ ಮಾವಿನ ತೋಟದಲ್ಲಿ ಭಾನುವಾರ ವ್ಯಕ್ತಿಯೊಬ್ಬ ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆನೇಕಲ್ನ ಚಂದಾಪುರ ಬಳಿಯ ಈಳಲಗಿ ಗ್ರಾಮದ ಯಲ್ಲಾರೆಡ್ಡಿ (70) ಮೃತ.
ಸ್ಥಳಕ್ಕೆ ಭೇಟಿ ನೀಡಿದ ರಾಯಲ್ಪಾಡು ಠಾಣಾಧಿಕಾರಿ ಹೇಮಂತ್ ಮೃತರ ಕುಟುಂಬದವರನ್ನು ವಿಚಾರಿಸಿ, ಪ್ರಕರಣ ದಾಖಲಿಸಿಕೊಂಡಿದ್ದು, ಶ್ರೀನಿವಾಸಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಕುಟುಂಬದವರಿಗೆ ಮೃತದೇಹ ಹಸ್ತಾಂತರಿಸದರು.
ಪೊಲೀಸ್ ಸಿಬ್ಬಂದಿ ಆಂಜಿ, ಮುರಳಿ, ರೆಡ್ಡಪ್ಪ ಇದ್ದರು.