ಕೊಟ್ಟೂರಿನಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಮಗ್ರಿಗಳನ್ನು ಅಪ್ಪು ಬಳಗ ಅಭಿಮಾನಿಗಳು ವಿತರಿಸಿದರು. ಬಳಗದ ಅಧ್ಯಕ್ಷ ಪ್ರಕಾಶ್ ರಾಂಪುರ, ಉಪಾಧ್ಯಕ್ಷ ಕೆ.ಎಂ. ಗುರುಸ್ವಾಮಿ, ಅಡವಿಹಳ್ಳಿ ರಾಜು, ಬಿ.ರವಿ, ಮಂಗಳಮುಖಿಯರಾದ ರುದ್ರಮ್ಮ, ಗೌರಮ್ಮ ಇನ್ನಿತರರಿದ್ದರು. 
ಜಿಲ್ಲೆ

ಅಭಿಮಾನಿಗಳ ಹೃದಯದಲ್ಲಿ ಅಪ್ಪು ಸ್ಥಿರ

ಕೊಟ್ಟೂರು: ಡಾ.ಪುನೀತ್ ರಾಜಕುಮಾರಂತೆ ಸಮಾಜಮುಖಿ ಕೆಲಸಗಳನ್ನು ಮಾಡಿದ್ದರೆ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲಸಬಹುದು ಎಂದು ದಿ.ಡಾ.ಪುನೀತ್ ರಾಜಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ಪ್ರಕಾಶ್ ರಾಂಪುರ ಹೇಳಿದರು.

ಅಪ್ಪುರಂತೆ ಸಮಾಜಮುಖಿ ಕೆಲಸ ಮಾಡಿ

ಪಟ್ಟಣದ ತೇರುಗಡ್ಡೆ ಹತ್ತಿರ ಪುನೀತ್‌ರ ಎರಡನೇ ಪುಣ್ಯಸ್ಮರಣೆ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಭಾನುವಾರ ಮಾತನಾಡಿದರು. ಕರುನಾಡಿನ ಸಹಸ್ರಾರು ಅಭಿಮಾನಿಗಳ ಹೃದಯದಲ್ಲಿ ಪುನೀತ್ ಸ್ಥಿರವಾದ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಭಾವುಕರಾದರು.

ಅಪ್ಪು ಪುಣ್ಯ ಸ್ಮರಣೆ ಅಂಗವಾಗಿ 100 ವಿದ್ಯಾರ್ಥಿಗಳಿಗೆ ಅಪ್ಪು ಚಿತ್ರವಿರುವ ಪ್ಲೈವುಡ್, ನೋಟ್ ಪುಸ್ತಕ, ಪೆನ್, ಪೆನ್ಸಿಲ್ ವಿತರಿಸಲಾಯಿತು. ಮಂಗಳಮುಖಿ ರುದ್ರಮ್ಮ ಮತ್ತು ಗೌರಮ್ಮ ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಗಳನ್ನು ಅರ್ಪಿಸಿದರು.
ಉಪಾಧ್ಯಕ್ಷ ಕೆ.ಎಂ. ಗುರುಸ್ವಾಮಿ, ಪ್ರಮುಖರಾದ ಗಜಾಪುರ ರಾಜು, ಅಡವಿಹಳ್ಳಿ ರಾಜಪ್ಪ, ಬಿ.ರವಿ, ಶಿಕ್ಷಕರಾದ ಮುತ್ತೇಶ್, ಎಂ. ಶಿವಕುಮಾರ್, ಐ. ಮಂಜುನಾಥ್, ಆರ್. ಶಿವಪ್ರಸಾದ್ ಇನ್ನಿತರರಿದ್ದರು.