ಜಿಲ್ಲೆ

ಶಿಕ್ಷಕರಿಗೆ ನೆನಪಿನ ಶಕ್ತಿ ಮುಖ್ಯ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ನೆನಪು ಮಾನವನಿಗೆ ಅತೀ ಮೌಲ್ಯವಾದ ಆಯುಧ. ಕಹಿ ನೆನಪುಗಳನ್ನು ಮರೆಯುವುದು ಒಂದು ವರದಾನವಾಗಿದೆ. ಗೊಂದಲ ಹೆಚ್ಚಾಗುವುದು ಮತ್ತು ಏಕಾಗ್ರತೆ ಕಡಿಮೆಯಾಗುವುದು ಒಳ್ಳೆಯ ಲಣವಲ್ಲ ಎಂದು ಎಸ್​ಡಿಎಂ ವೈದ್ಯಕಿಯ ಕಾಲೇಜಿನ ಪ್ರಾಚಾಯೆರ್ ಡಾ. ರತ್ನಮಾಲಾ ದೇಸಾಯಿ ಹೇಳಿದರು.
ನಗರದ ಎಸ್​ಡಿಎಂ ವೈದ್ಯಕಿಯ ಕಾಲೇಜಿನ ಶರೀರ ಕ್ರಿಯಾ ಶಾಸ್ತ್ರ ವಿಭಾಗದಿಂದ ಕಾಲೇಜು ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ನೆನಪು ಮತ್ತು ಮರೆವು ವಿಷಯ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಉತ್ತಮ ಶಿಣ ನೀಡಲು ಶಿಕ್ಷಕರು ಉತ್ತಮ ನೆನಪಿನ ಶಕ್ತಿ ಹೊಂದಿರಬೇಕು. ಉತ್ತಮ ನೆನಪು ಮತ್ತು ಒಳ್ಳೆ ಜ್ಞಾನವು ಜೀವನದಲ್ಲಿ ಮರುಕಳಿಸುತ್ತಿರಬೇಕು ಎಂದರು.
ಕಾರ್ಯಾಗಾರ ಸಂಟನಾ ಅಧ್ಯ ಡಾ. ನಾಗಲಕ್ಷಿ$್ಮ, ಡಾ. ಗ್ರಾಮೋಪಾಧ್ಯಾಯ ಭೂಷಣ, ಡಾ. ಸಚಿನ್​ ಬಿ.ಎಸ್​, ಡಾ. ಮಲ್ಲಿಕಾರ್ಜುನಗೌಡರ ಉಪನ್ಯಾಸ ನೀಡಿದರು.
ಎಸ್​ಡಿಎಂ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ. ನಿರಂಜನ ಕುಮಾರ ಕಾರ್ಯಕ್ರಮ ಉದ್ಘಾಟಿಸಿದರು. ಎಸ್​ಡಿಎಂ ವಿವಿ ಕಾರ್ಯ ನಿರ್ವಾಹಕ ನಿರ್ದೇಶಕಿ ಪದ್ಮಲತಾ ನಿರಂಜನಕುಮಾರ, ಕುಲಸಚಿವ ಡಾ. ಚಿದೇಂದ್ರ ಶೆಟ್ಟರ, ಉತ್ತರ ಕರ್ನಾಟಕದ 200ಕ್ಕೂ ಹೆಚ್ಚು ಪ್ರಾಧ್ಯಾಪಕರು ಮತ್ತು ವೈದ್ಯಕಿಯ ವಿದ್ಯಾಥಿರ್ಗಳು ಪಾಲ್ಗೊಂಡಿದ್ದರು.
ಡಾ. ಶ್ವೇತಾ ಗೌಡಪ್ಪಣ್ಣವರ ಸ್ವಾಗತಿಸಿದರು. ವೈಷ್ಣವಿ ಕುಲಕಣಿರ್ ಮತ್ತು ವೇಣು ನಿರೂಪಿಸಿದರು. ಡಾ. ವಿದ್ಯಾ ನಾಡಗೇರ ವಂದಿಸಿದರು.