ಮೈಸೂರು: ಭೂಮಿಕಾ ಅಸೋಸಿಯೇಟ್ಸ್ ಹಾಗೂ ದಿ.ಮೈಕ್ ಚಂದ್ರು ಗೆಳೆಯರ ಬಳಗದಿಂದ 78ನೇ ಸ್ವಾತಂತ್ರೋತ್ಸವ ಸಂಭ್ರಮಾಚರಣೆ ಪ್ರಯುಕ್ತ ನಗರದ ನಾದಬ್ರಹ್ಮ ಸಂಗೀತ ಸಭಾದಲ್ಲಿ ಆ.15ರಂದು ಸಂಜೆ 5.15ಕ್ಕೆ ‘ನೆನಪಿನ ದೋಣಿ’ ಗೀತ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಆಕಾಶವಾಣಿ ಕಲಾವಿದ ಮಂಜುನಾಥ್ ತಿಳಿಸಿದರು.
78ರ ಸಂಭ್ರಮಕ್ಕೆ 28ರ ಕೊಡುಗೆ ಎಂಬ ಥೀಮ್‌ನಲ್ಲಿ ಕಾರ್ಯಕ್ರಮ ನಡೆಸುತ್ತಿದ್ದು, 60ರಿಂದ 90ರ ದಶಕದಲ್ಲಿ ಜನರ ಮನಸೂರೆಗೊಂಡ ಕನ್ನಡ ಮತ್ತು ಹಿಂದಿ ಚಲನಚಿತ್ರಗಳ 28 ಗೀತೆಗಳನ್ನು ರಿದಂ ಪ್ಯಾಡ್ ಕಲಾವಿದ ವಿನಯ್ ರಂಗಧೋಳ್ ಸಾರಥ್ಯದಲ್ಲಿ ಯುವ ಗಾಯಕರು ಪ್ರಸ್ತುತಪಡಿಸಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗಾಯಕ ಮೈಸೂರು ಆನಂದ್, ಬಳಗದ ಸದಸ್ಯರಾದ ಮುರಳಿ, ಎಚ್.ಅಶ್ವತ್ಥನಾರಾಯಣ ಇದ್ದರು.