ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗಿಣಿಗೇರಾ ಗ್ರಾಮಸ್ಥರು ಶನಿವಾರ ಕೊಪ್ಪಳದಲ್ಲಿ ಎಡಿಸಿ ಸಾವಿತ್ರಿ ಕಡಿಗೆ ಮನವಿ ಸಲ್ಲಿಸಿದರು. ಗ್ರಾಮಸ್ಥರಾದ ಶರಣು ಗಡ್ಡಿ, ಮಂಗಳೇಶ ರಾಠೋಡ್, ದಾವಲ್ ಮಲ್ಲಿಕ್, ದಾನಪ್ಪ ಹಲಗೇರಿ, ಮೌನೇಶ, ಜಗದೀಶ, ಮಂಜುನಾಥ ಇದ್ದರು.  
ಜಿಲ್ಲೆ

ಗಿಣಗೇರಾ ಧೂಳು ಮುಕ್ತಗೊಳಿಸಿ

ಕೊಪ್ಪಳ: ತಾಲೂಕಿನ ಗಿಣಗೇರಾ ಗ್ರಾಮದಲ್ಲಿ ಬಾಕಿ ರಸ್ತೆ ಕಾಮಗಾರಿ ಪೂರ್ಣಗೊಳಿಸುವುದು ಹಾಗೂ ಧೂಳು ಮುಕ್ತ ಗ್ರಾಮ ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ಶನಿವಾರ ಎಡಿಸಿ ಸಾವಿತ್ರಿ ಕಡಿಗೆ ಮನವಿ ಸಲ್ಲಿಸಿದರು.

ಹಲವು ಹೋರಾಟದ ಬಳಿಕ ಗ್ರಾಮದಲ್ಲಿ 600 ಮೀಟರ್ ರಸ್ತೆ ನಿರ್ಮಿಸಲಾಗಿದೆ. ಬಾಕಿ ಕಾಮಗಾರಿ ಹಾಗೇ ಉಳಿದಿದೆ. ಅಲ್ಲದೇ ರಸ್ತೆಯಲ್ಲಿ ವಿವಿಧ ಕಂಪನಿಗಳ ಬೃಹತ್ ವಾಹನಗಳ ಓಡಾಟ ಮುಂದುವರೆದಿದ್ದು, ಸಾಕಷ್ಟು ಧೂಳು ಬರುತ್ತಿದೆ.

ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ತಗ್ಗು ಗುಂಡಿಗಳಲ್ಲಿ ನೀರು ಸಂಗ್ರಹಗೊಂಡು ಸೊಳ್ಳೆ ಹೆಚ್ಚುತ್ತಿವೆ. ಡೆಂೆ ಪ್ರಕರಣ ಅಧಿಕಗೊಳ್ಳುತ್ತಿವೆ ಎಂದು ಆರೋಪಿಸಿದರು.

ಗ್ರಾಮದ ಸುತ್ತಲಿನ ಕಾರ್ಖಾನೆಗಳಿಂದ ಬರುವ ಧೂಳು ನಿಯಂತ್ರಿಸಬೇಕು. 24*7 ಆರೋಗ್ಯ ಸೇವೆ ಒದಗಿಸಿ. ರಸ್ತೆಗೆ ನೀರು ನಿರಂತರವಾಗಿ ಸಿಂಪಡಿಸಬೇಕು. ಸ್ಥಳೀಯ ಯುವಕರಿಗೆ ಕಾರ್ಖಾನೆಯಲ್ಲಿ ಕೆಲಸ ಕೊಡಬೇಕು.

ಬೇಡಿಕೆ ಈಡೇರಿಸದಿದ್ದರೆ ಹೋರಾಟ ಹಮ್ಮಿಕೊಳ್ಳುವುದಾಗಿ ತಿಳಿಸಿದರು. ಗ್ರಾಮಸ್ಥರಾದ ಶರಣು ಗಡ್ಡಿ, ಮಂಗಳೇಶ ರಾಠೋಡ್, ದಾವಲ್ ಮಲ್ಲಿಕ್, ದಾನಪ್ಪ ಹಲಗೇರಿ, ಮೌನೇಶ, ಜಗದೀಶ, ಮಂಜುನಾಥ, ಪ್ರಶಾಂತ ಹಿರೇಮಠ, ಅಂಬಣ್ಣ, ವಿಜಯ, ಕೆ.ರಮೇಶ ಇತರರಿದ್ದರು.