ಬೆಂಗಳೂರು: ಲಾಕ್ಡೌನ್ನಿಂದ ಪ್ರತಿಕಾ ವಿತರಕರಿಗೆ ಸಂಕಷ್ಟ ಎದುರಾ ಗಿದೆ. ದಿನಪತ್ರಿಕೆಗಳ ವಿತರಕರಿಗೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಎಂದು ಕರ್ನಾಟಕ ದಿನಪತ್ರಿಕೆ ವಿತರಕರು ಶುಕ್ರವಾರ ಉಪ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಕರೊನಾ ಸೋಂಕು, ಲಾಕ್ಡೌನ್ ಸಮಯ ದಲ್ಲೂ ದಿನಪತ್ರಿಕೆ ವಿತರಕರು ತಮ್ಮ ಜೀವದ ಹಂಗು ತೊರೆದು ದಿನಪತ್ರಿಕೆಗಳನ್ನು ಓದುಗರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆದ್ದರಿಂದ ಸಾವಿರಾರು ವಿತರಕರು ಸಮಸ್ಯೆಗೆ ಸಿಲುಕಿದ್ದು, ಅವರಿಗೆ ತಲಾ 5 ಸಾವಿರ ರೂ. ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದರು.
ಕರೊನಾ ಭೀತಿಯಿಂದ ಮನೆ ಹತ್ತಿರ ಸಹ ಬರಬೇಡಿ ಎಂದು ಹಲವರು ಪತ್ರಿಕೆ ಚಂದಾದಾರಿಕೆ ಸ್ಥಗಿತಗೊಳಿಸಿದ್ದಾರೆ. ಇನ್ನು ಕೆಲವರು ತಿಂಗಳ ಬಿಲ್ ಮೊತ್ತ ಪಾವತಿ ಮಾಡದೆ ಸಮಸ್ಯೆಯಾಗಿದೆ. ಇದರಿಂದ ರಾಜ್ಯಾದ್ಯಂತ 25 ಸಾವಿರಕ್ಕೂ ಅಧಿಕ ವಿತರಕರು ಸಂಕಷ್ಟದಲ್ಲಿದ್ದಾರೆ. ಸರ್ಕಾರದಿಂದ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಎಂದು ಒತ್ತಾಯಿಸಿದರು.