ಜಬ್ಬಲಗುಡ್ಡದಲ್ಲಿ ಗಣಿಗಾರಿಕೆಗೆ ಅವಕಾಶ ನೀಡದಂತೆ ಒತ್ತಾಯಿಸಿ ಕರವೇ ಪ್ರವೀಣ ಶೆಟ್ಟಿ ಬಣದ ಜಿಲ್ಲಾ ಪದಾಧಿಕಾರಿಗಳು ಶುಕ್ರವಾರ ಡಿಸಿಗೆ ಮನವಿ ಸಲ್ಲಿಸಿದರು. ಬಣದ ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ, ತಾಲೂಕು ಅಧ್ಯಕ್ಷ ವೆಂಕಟೇಶ ಈಳಿಗೇರ, ಕಾರ್ಯಕರ್ತರಾದ ಶರಣಪ್ಪ ಗುತ್ತೂರು, ಶಿವಪ್ಪ ರಾಠೋಡ್, ಹನುಮಂತ ಕಾರಟಗಿ ಇದ್ದರು. 
ಜಿಲ್ಲೆ

ಗಣಿಗಾರಿಕೆ ಪರವಾನಗಿ ನೀಡಬೇಡಿ

Kopala - Raveendra V K

ಕೊಪ್ಪಳ: ತಾಲೂಕಿನ ಜಬ್ಬಲಗುಡ್ಡದ ಗಂಡುಗಲಿ ಕುಮಾರರಾಮ ಬೆಟ್ಟದ ಪಕ್ಕದಲ್ಲಿ ಗಣಿಗಾರಿಕೆಗೆ ಅವಕಾಶ ನೀಡದಂತೆ ಒತ್ತಾಯಿಸಿ ಕರವೇ ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ನಲಿನ್ ಅತುಲ್‌ಗೆ ಮನವಿ ಸಲ್ಲಿಸಿದರು.

ಜಬ್ಬಲಗುಡ್ಡದಲ್ಲಿ ಐತಿಹಾಸಿಕ ಗಂಡುಗಲಿ ಕುಮಾರ ರಾಮ ಬೆಟ್ಟವಿದೆ. ಜತೆಗೆ ಶಿಲಾ ಶಾಸನಗಳು, ಐತಿಹಾಸಿ ಸ್ಮಾರಕಗಳು, ಇತಿಹಾಸ ಕುರುಹುಗಳಿವೆ. ಅರಣ್ಯ ಪ್ರದೇಶವಿದ್ದು, ಕಾಡು ಪ್ರಾಣಿಗಳು ನೀರು ಅರಸಿ ಬೆಟ್ಟದಕ್ಕೆ ಬರುತ್ತವೆ. ಆದರೆ, ಬೆಟ್ಟಕ್ಕೆ ಹೊಂದಿಕೊಂಡು ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಲು ಮುಂದಾಗಿರುವುದು ಸರಿಯಲ್ಲವೆಂದು ಖಂಡಿಸಿದರು.

ಐತಿಹಾಸಿಕ ಸ್ಮಾರಕಕ್ಕೆ ಆಗುವ ಧಕ್ಕೆ ತಡೆಯಬೇಕು. ಗಣಿಗಾರಿಕೆಗೆ ಅವಕಾಶ ನೀಡಬಾರದು. ಗಣಿ, ಪುರಾತತ್ವ ಇಲಾಖೆ ನಿಯಮ ಗಾಳಿಗೆ ತೂರಿದ್ದು, ತಕ್ಷಣ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸುತ್ತಲ ರೈತರಿಗೆ ಆಗುವ ಅನ್ಯಾಯ ತಪ್ಪಿಸಬೇಕು. ಜಿಲ್ಲೆಯ ಇತಿಹಾಸ, ಸ್ಮಾರಕ, ಕಲೆ ಉಳಿಸುವ ಕೆಲಸ ಮಾಡಬೇಕು.

ಗಣಿಗಾರಿಕೆಗೆ ಅವಕಾಶ ನೀಡಿದಲ್ಲಿ ಮುಂದೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಕರವೇ ಪ್ರವೀಣ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ, ತಾಲೂಕು ಅಧ್ಯಕ್ಷ ವೆಂಕಟೇಶ ಈಳಿಗೇರ, ಕಾರ್ಯಕರ್ತರಾದ ಶರಣಪ್ಪ ಗುತ್ತೂರು, ಶಿವಪ್ಪ ರಾಠೋಡ್, ಹನುಮಂತ ಕಾರಟಗಿ, ನಾಗರಾಜ ಸುಣಗಾರ, ಪಾಂಡಪ್ಪ ರಾಠೋಡ್ ಇತರರಿದ್ದರು.