ಜಿಲ್ಲೆ

ಪಾಪು ಅಭಿಮಾನಿ ಬಳಗಕ್ಕೆ ಸದಸ್ಯರ ಬೆಂಬಲ

ವಿಜಯವಾಣಿ ಸುದ್ದಿಜಾಲ ಧಾರವಾಡ

ವಿದ್ಯಾವರ್ಧಕ ಸಂಘದ ಅಭಿವೃದ್ಧಿ ವಿಚಾರವಾಗಿ ನಾವು ನೀಡಿರುವ ಭರವಸೆಗಳಿಗೆ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ನಮಗೆ ಬೆಂಬಲ ನೀಡುತ್ತಿದ್ದಾರೆ ಎಂದು ಪಾಪು ಅಭಿಮಾನಿ ಬಳಗದ ಪ್ರಕಾಶ ಉಡಿಕೇರಿ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಚುನಾವಣೆ ಹಿನ್ನೆಲೆಯಲ್ಲಿ ನಗರದ ಕೆಂಪಗೇರಿಯಲ್ಲಿನ ಚುನಾವಣಾ ಕಚೇರಿಯಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಸಂಘವನ್ನು ಗಟ್ಟಿಗೊಳಿಸುವುದರ ಜತೆಗೆ ಆರ್ಥಿಕವಾಗಿ ಸಹ ಸದೃಢಗೊಳಿಸುತ್ತೇವೆ ಎಂಬ ಅಚಲ ನಿರ್ಧಾರಕ್ಕೆ ಮತದಾರರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವುಗಳ ಜತೆಗೆ ಒಂದೇ ವರ್ಗದ ಕಲಾವಿದರಿಗೆ ಅವಕಾಶ ನೀಡದೆ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವುದು, ಸರ್ಕಾರದ ಅನುದಾನದ ಜತೆಗೆ ಸಿಎಸ್​ಆರ್​ ಅನುದಾನ ತರುವುದಕ್ಕೂ ನಮ್ಮ ನಿರ್ಧಾರಕ್ಕೆ ಸಹಮತ ವ್ಯಕ್ತವಾಗಿದೆ. ಈ ಎಲ್ಲ ಕಾರಣಗಳಿಗೆ ಜನರು ಬೆಂಬಲಿಸಲು ಮುಂದಾಗಿದ್ದಾರೆ ಎಂದರು.

ವೀರಣ್ಣ ಯಳಲ್ಲಿ ಮಾತನಾಡಿದರು. ಮೋಹನ ಲಿಂಬಿಕಾಯಿ, ಡಾ. ಶರಣಪ್ಪ ಕೊಟಗಿ, ಡಾ. ರತ್ನಾ ಐರಸಂಗ, ಮಾರ್ತಾಂಡಪ್ಪ ಕತ್ತಿ, ವೀರಣ್ಣ ಯಳಲ್ಲಿ, ಪ್ರಭು ಹಂಚಿನಾಳ, ಪ್ರೊ. ಹರ್ಷ ಡಂಬಳ, ಎಸ್​.ಎಂ. ದಾನಪ್ಪಗೌಡರ, ಆನಂದ ಏಣಗಿ, ವಿಶ್ವನಾಥ ಅಮರಶೆಟ್ಟಿ, ಪ್ರಭು ಕುಂದರಗಿ, ಇತರರು ಇದ್ದರು.