ಜಿಲ್ಲೆ

ಗ್ರಾಪಂ ಅಧ್ಯಕ್ಷರ ವಿರುದ್ಧ ತನಿಖೆಗೆ ಸದಸ್ಯರ ಮನವಿ

Mysuru - Desk - Naveen Kumar H P

ಕೊಳ್ಳೇಗಾಲ : 15ನೇ ಹಣಕಾಸು ಯೋಜನೆ ಶಾಸನಬದ್ಧ ಅನುದಾನ ವರ್ಗ, ತೆರಿಗೆ ವಸೂಲಾತಿ ಹಣ ವರ್ಗದ ಖಾತೆಯ ದುರುಪಯೋಗ ಮಾಡಿಕೊಂಡಿರುವ ಸತ್ತೇಗಾಲ ಗಾಮ ಪಂಚಾಯಿತಿ ಅಧ್ಯಕ್ಷ ಎಲ್.ಕೆಂಪರಾಜು ವಿರುದ್ಧ ತನಿಖೆ ನಡೆಸಬೇಕು ಹಾಗೂ ಪ್ರಸ್ತುತ ಬಂದಿರುವ 15ನೇ ಹಣಕಾಸು ಕ್ರಿಯಾಯೋಜನೆ ತಡೆಹಿಡಿಯಬೇಕೆಂದು ಗ್ರಾಪಂ ಸದಸ್ಯರು ಒತ್ತಾಯಿಸಿದ್ದಾರೆ.

ಶನಿವಾರ ಜಿಪಂ ಸಿಇಒ ಮೋನಾರೋತ್, ಜಿಪಂ ಉಪ ಕಾರ್ಯದರ್ಶಿ ಲಕ್ಷ್ಮೀ, ತಾಪಂ ಇಒ ಶಾಂತಪ್ಪ ಬೆಳ್ಳುಂಡಗಿ ಅವರಿಗೆ ಸತ್ತೇಗಾಲ ಗ್ರಾ.ಪಂ ಉಪಾಧ್ಯಕ್ಷ ಹಾಗೂ ಸದಸ್ಯರು ಮನವಿ ನೀಡಿದ್ದಾರೆ.

ಅಧ್ಯಕ್ಷರ 5 ವಾರ್ಡ್‌ನಲ್ಲಿ ಸ್ವಚ್ಛತಾ ಕಾಮಗಾರಿ ಹೆಸರಿನಲ್ಲಿ ಐದು ಬಿಲ್ ಪಾವತಿ ಆಗಿದೆ. 2023 ಆ.21 ರಂದು ಸಾಮಾನ್ಯ ಸಭೆಯಲ್ಲಿ 2021-22 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರದ ಅನುದಾನದ ಮೊತ್ತಕ್ಕೆ ಕ್ರಿಯಾ ಯೋಜನೆ ಮಾಡಿದ್ದು, ಇದರಲ್ಲಿ ಸತ್ತೆಗಾಲ

ಹ್ಯಾಂಡ್‌ಪೋಸ್ಟ್‌ನಲ್ಲಿರುವ ಸಮುದಾಯ ಶೌಚಗೃಹದ ಮುಂದುವರೆದ ಕಾಮಗಾರಿಗೆ 1.5 ಲಕ್ಷ ರೂ. ಹಾಗೂ ಪೀಠೋಪಕರಣ ಖರೀದಿ ಹಾಗೂ ಗಣಕಯಂತ್ರ ಮತ್ತು ಪ್ರಿಂಟಿಂಗ್ ಖರೀದಿಗಾಗಿ 3.5 ಲಕ್ಷ ರೂ. ಎಂದು ಸಾಮಾನ್ಯ ಸಭೆಯಲ್ಲಿ ನಡವಳಿಯಾಗಿದೆ.

ಆದರೆ ಅಧ್ಯಕ್ಷರು ಪಿಟೋಪಕರಣಗಳನ್ನು ವಸೂಲಾತಿ ಹಣದಲ್ಲಿ 3 ಬಿಲ್ ಮಾಡಿ 3 ಲಕ್ಷ ರೂ. ಬಳಸಿದ್ದಾರೆ. ಎಲ್ಲ ವಾರ್ಡ್‌ಗಳ ಸ್ವಚ್ಛತೆಯಲ್ಲಿ ಕಳಪೆ ಮಾಡಿ ಜೆಸಿಬಿ ಮಾಲೀಕರಿಂದ ನಕಲಿ ಬಿಲ್ ತಯಾರಿಸಿ ಹಣ ದುರುಪಯೋಗ ಮಾಡಿದ್ದಾರೆ. 15 ನೇ ಹಣಕಾಸು ಯೋಜನೆಯಲ್ಲಿ

ದುರುಪಯೋಗ ಮಾಡಿರುವ ಕಾಮಗಾರಿಗಳು ಅಂತೆಯೇ, ಚೆನ್ನಿಪುರದ ದೊಡ್ಡಿಯ ಸರ್ಕಾರಿ ಪ್ರಾಥಮಿಕ ಶಾಲೆಗೆ ತಾ.ಪಂ.ನಲ್ಲಿ 2023-24ನೇ ಸಾಲಿನ ಅನಿಬರ್ಂದಿತ ಅನುದಾನದಲ್ಲಿ ಶಾಲೆಯ ಛಾವಣಿ ದುರಸ್ತಿ ಕಾಮಗಾರಿ 2 ಲಕ್ಷ ರೂ. ಮಾಡಿರುತ್ತಾರೆ ಎಂದು ಆರೋಪಿಸಿದರು.

ಇದೇ ಶಾಲೆಗೆ ಗ್ರಾ.ಪಂ.ನಲ್ಲಿ 2023-24ನೇ ಸಾಲಿನ 15ನೇ ಹಣಕಾಸು ಯೋಜನೆಯಲ್ಲಿ ಛಾವಣಿ ದುರಸ್ತಿ ಹಾಗೂ ಬಣ್ಣ ಬಳಿಯುವ ಕಾಮಗಾರಿಗೆ ಒಂದೊಂದು ಲಕ್ಷದಂತೆ 2 ಲಕ್ಷ ರೂ. ಬಿಲ್ ಮಾಡಿ ದುರುಪಯೋಗ ಪಡಿಸಿಕೊಂಡಿದ್ದಾರೆ. 2ನೇ ವಾರ್ಡ್‌ನ ಡೇರಿ ಸೈಟ್‌ನ

ಪ್ರಕಾಶ್ ಎಂಬುವರ ಮನೆಯಿಂದ ಮಹೇಶ್ ಅವರ ಮನೆಯವರಿಗೆ ಚರಂಡಿ ಕಾಮಗಾರಿ ಮಾಡದೆ ನಕಲಿ ಫೋಟೋ ಹಾಕಿ 1 ಲಕ್ಷ ರೂ. ಬಿಲ್ ಪಾವತಿ ಮಾಡಿರುತ್ತಾರೆ. ಶಿವನಸಮುದ್ರದಲ್ಲಿ ಪಾಲ ನಿರ್ಮಾಣ ಮಾಡದಿದ್ದರೂ 35 ಸಾವಿರ ರೂ. ಬಿಲ್ ಪಾವತಿ ಮಾಡಿರುತ್ತಾರೆ ಎಂದು ದೂರಿದರು.

ಕುಡಿಯುವ ನೀರಿನ ಸಾಮಗ್ರಿ ಹಾಗೂ ಬೀದಿ ದೀಪ ಖರೀದಿಯಲ್ಲಿ ಭಾರಿ ಅವ್ಯವಹಾರ ಆಗಿದೆ. ಅಧ್ಯಕ್ಷರು ಹಾಗೂ ಪಿಡಿಒ ಪನ್ನಾಡಿ ನಾಯಕ ಎಂಬ ಗುತ್ತಿಗೆದಾರನಿಗೆ 50 ಕ್ಕೂ ಹೆಚ್ಚು 15ನೇ ಹಣಕಾಸು ಹಾಗೂ ತೆರಿಗೆ ವಸೂಲಾತಿಗಳ ಕಾಮಗಾರಿಗಳಿಗೆ ತುಂಡು ಗುತ್ತಿಗೆ ನೀಡಿದ್ದಾರೆ. ಅಧ್ಯಕ್ಷರ ಅತ್ತೆ ಆಗಿರುವ ಕಾಯಕ ಮಿತ್ರ ಹೇಮಾವತಿ ಹಾಗೂ ಅಧ್ಯಕ್ಷರು ಇಬ್ಬರು ಗುತ್ತಿಗೆದಾರರಾದ ಪನ್ನಾಡಿ ನಾಯ್ಕನಿಗೆ ನರೇಗಾ

ಕಾಮಗಾರಿಯಲ್ಲಿ ಕೂಲಿ ಕೆಲಸಕ್ಕೆ ಬಂದಿದ್ದಾರೆ ಎಂದು ನಕಲಿ ಹಾಜರಾತಿ ಹಾಕಿ ಗುತ್ತಿಗೆದಾರರ ಬ್ಯಾಂಕ್ ಖಾತೆಗೆ ನರೇಗಾ ಹಣ ಜಮೆ ಮಾಡಿದ್ದಾರೆ. ಇವೆಲ್ಲ ಅಕ್ರಮವನ್ನು ಪ್ರಶ್ನಿಸಿದ ಸದಸ್ಯರಿಗೆ ಅಧ್ಯಕ್ಷರು ದಮ್ಕಿ ಹಾಕುತ್ತಾರೆ. ಈ ಬಗ್ಗೆ ಪರಿಶೀಲಿಸಿ ಕಾನೂನ ಕ್ರಮ ಕೈ ಗೊಳ್ಳಬೇಕು ಹಾಗೂ ಪ್ರಸ್ತುತ 2024-25 ನೇ ಸಾಲಿನ 15ನೇ ಹಣಕಾಸು ಕ್ರಿಯ ಯೋಜನೆ ಮಾಡದಂತೆ ತಡೆ ಹಿಡಿಯ ಬೇಕೆಂದು ಸದಸ್ಯರು ಒತ್ತಾಯಿಸಿದ್ದಾರೆ.