ಜಿಲ್ಲೆ

ಏಕವ್ಯಕ್ತಿ ಟೆಂಡರ್​ಗೆ ಸದಸ್ಯರ ವಿರೋಧ

ತುಮಕೂರು ಡೆಸ್ಕ್

ಚಿಕ್ಕನಾಯಕನಹಳ್ಳಿ ಪುರಸಭೆ ಸಾಮಾನ್ಯ ಸಭೆಯಲ್ಲಿ ಮೂಡಿದ ಒಮ್ಮತ | ಮರು ಗುತ್ತಿಗೆಗೆ ಒತ್ತಾಯ

ವಿಜಯವಾಣಿ ಸುದ್ದಿಜಾಲ ಚಿಕ್ಕನಾಯಕನಹಳ್ಳಿ
ಪುರಸಭೆಯ ವಾರ್ಡ್​ವಾರು ಆಗಬೇಕಿರುವ ಕೆಲಸಗಳ ಬಗ್ಗೆ ಸದಸ್ಯರಿಗೆ ಯಾವುದೇ ಮಾಹಿತಿ ನೀಡದೆ ಪುರಸಭೆ ಅಧಿಕಾರಿಗಳು ಮನಸ್ಸಿಗೆ ಬಂದಂತೆ ಕಾರ್ಯಯೋಜನೆ ರೂಪಿಸಿದ್ದಾರೆ. ಏಕವ್ಯಕ್ತಿ ಗುತ್ತಿಗೆದಾರರು ಅರ್ಜಿಸಲ್ಲಿಸಿರುವ ಟೆಂಡರ್​ ರದ್ದುಪಡಿಸಬೇಕು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಸದಸ್ಯರು ಒತ್ತಾಯಿಸಿದರು.


ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ಸೋಮವಾರ ಪುರಸಭೆ ಅಧ್ಯಕ್ಷ ಸಿ.ಎಚ್​.ದಯಾನಂದ್​ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಮಾತನಾಡಿ, 2021-&22ನೇ ಸಾಲಿನಲ್ಲಿ 47.16ಲಕ್ಷ ರೂ. 7 ಕಾಮಗಾರಿ, 16.74 ಲಕ್ಷ ರೂ.ನ 3 ಕಾಮಗಾರಿ, 2022&-23ನೇ ಸಾಲಿನಲ್ಲಿ 54.88 ಲಕ್ಷ ರೂ.ಗಳಲ್ಲಿ 6 ಕಾಮಗಾರಿ, ಅಮೃತ್​ ನಿರ್ಮಲ್​ ನಗರ ಯೋಜನೆಯಡಿ 5.11 ಲಕ್ಷ ರೂ.ನ ಒಂದು ಕಾಮಗಾರಿ, 2023-&24ನೇ ಸಾಲಿನ ಎಸ್​ಬಿಎಂ&2 ಅಡಿಯಲ್ಲಿ 29.99 ಲಕ್ಷ ರೂ. ಒಂದು ಕಾಮಗಾರಿ, ಎಸ್​ಎಫ್​ಸಿ ಮುಕ್ತನಿಧಿ ಅನುದಾನದಲ್ಲಿ 2 ಲಕ್ಷ ರೂ. ಒಂದು ಕಾಮಗಾರಿ, 15ನೇ ಹಣಕಾಸು ಯೋಜನೆಯಡಿ 60.54 ಲಕ್ಷ ರೂ.ನ 7 ಕಾಮಗಾರಿ, 2024&25ನೇಸಾಲಿನ 19 ಲಕ್ಷ ರೂ.ನ 2 ಕಾಮಗಾರಿ, 15ನೇ ಹಣಕಾಸು ಯೋಜನೆಯಡಿ 72.16 ಲಕ್ಷ ರೂ.ನ 6 ಕಾಮಗಾರಿ, ಎಸ್​ಎಫ್​ಸಿ ಅನುದಾನದಡಿ 29.69 ಲಕ್ಷ ರೂ.ನ 1 ಕಾಮಗಾರಿಯ ಟೆಂಡರ್​ಗೆ ಅನುಮೋದನೆ ನೀಡಲು ಕೆಲವು ಏಕವ್ಯಕ್ತಿ ಗುತ್ತಿಗೆದಾರರು ಅರ್ಜಿಸಲ್ಲಿಸಿದ್ದು, ಈ ಟೆಂಡರ್​ ರದ್ದುಪಡಿಸಿ ಮತ್ತೊಮ್ಮೆ ಗುತ್ತಿಗೆ ಕರೆಯುವಂತೆ ಒಮ್ಮತದಿಂದ ತೀಮಾರ್ನಿಸಿದರು.

ಕಳೆದ ಹಲವಾರು ವರ್ಷಗಳ ಪಿಎಫ್​ ಹಣ ಪುರಸಭೆ ಪೌರಕಾರ್ಮಿಕರ ಖಾತೆಗೆ ಜಮೆ ಆಗಿರುವುದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಈ ಹಿಂದಿನ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲು, ಪಟ್ಟಣದ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಾಗ ಗುರುತಿಸಿ ಅವುಗಳಿಗೆ ನಾಮಫಲಕ ಅಳವಡಿಸಲು, ಮಾರುಕಟ್ಟೆ ಬಳಿಯ ಗಾಂಧಿ ಶಿಶುವಿಹಾರ ತೆರವುಗೊಳಿಸುವಂತೆ ಸದಸ್ಯರು ತೀಮಾರ್ನಿಸಲಾಯಿತು.


ಸಭೆಯಲ್ಲಿ ಕೈಲಾಸ ರಥ ಹಾಗೂ ಪ್ರೀಜರ್​ ಬಾಕ್ಸ್​ ತರಲು ಟೆಂಡರ್​ಗೆ ಅನುಮೋದನೆ ನೀಡಿದ್ದು ಸ್ವಾಗತಾರ್ಹ. ಅದರಂತೆ ಹಳೆಯೂರು ಆಂಜನೇಯಸ್ವಾಮಿ ದೇವಾಲಯದ ಹಿಂಭಾಗದ ಕಲ್ಯಾಣಿ ದುರಸ್ತಿಗೆ ಕ್ರಮಕೈಗೊಳ್ಳುವಂತೆ ನಾಮಿನಿ ಸದಸ್ಯ ಮಹಮದ್​ ಹುಸೇನ್​ ತಿಳಿಸಿದರು.


ಸದಸ್ಯರಾದ ಬಾಬು, ರೇಣುಕಮ್ಮ, ಪೂರ್ಣಿಮಾ, ಮಮತಾ, ಲಕ್ಷ್ಮೀ, ಪುಷ್ಪಾ, ಜಯಮ್ಮ, ಸಿ.ಬಿ.ತಿಪ್ಪೇಸ್ವಾಮಿ, ನಾಗರಾಜು, ಮಲ್ಲೇಶಯ್ಯ, ನಾಮಿನಿ ಸದಸ್ಯರಾದ ಚಂದ್ರಶೇಖರ್​, ಸುಗಂದರಾಜು ಇದ್ದರು.

ಎಲ್ಲ ವಾರ್ಡ್​ಗಳಿಗೆ ಅನುದಾನ ಬಳಸಿ: ಸದಸ್ಯ ಸಿ.ಬಸವರಾಜು ಮಾತನಾಡಿ, ಪುರಸಭೆಯ ಅನುದಾನಗಳನ್ನು ಸಮರ್ಪಕವಾಗಿ ಎಲ್ಲ ವಾರ್ಡ್​ಗಳ ಅಭಿವೃದ್ಧಿಗೆ ಬಳಸಬೇಕು. ಕೇವಲ ಕೆಲವೇ ವಾರ್ಡ್​ಗಳಲ್ಲಿ ಬಳಸಿದರೆ ಇನ್ನುಳಿದ ವಾರ್ಡ್​ಗಳಿಗೆ ಅನ್ಯಾಯವಾಗುತ್ತದೆ. ಆದ್ದರಿಂದ ಅನುದಾನಗಳು ಸಮರ್ಪಕವಾಗಿ ಎಲ್ಲ ವಾರ್ಡ್​ಗಳಿಗೆ ಹಂಚಿಕೆಯಾಗಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಹಂತಹಂತವಾಗಿ ವಾರ್ಡ್​ಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುವುದು. ಈಗ ಟೆಂಡರ್​ ಕಾಮಗಾರಿಗಳು ನಡೆಯಲಿ, ಮುಂದೆ ವಿಶೇಷ 10 ಕೋಟಿ ರೂ. ಅನುದಾನ ಬರುವ ನೀರೀಕ್ಷೆ ಇದ್ದು ಅದರಲ್ಲಿ ಉಳಿದ ವಾರ್ಡ್​ಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುವುದು ಎಂದರು.